ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನಗರದಲ್ಲಿ ತಲೆ ಎತ್ತಿದ ಅಕ್ರಮ ಕಟ್ಟಡಕ್ಕೆ ನಗರಸಭೆ ಅಧಿಕಾರಿಗಳ ಸಾಥ್ !

ಉಡುಪಿ: ಉಡುಪಿಯ ಅಂಬಾಗಿಲು ಕಲ್ಸಂಕ ರಸ್ತೆಯಲ್ಲಿರುವ ಧರಣಿ ಆರ್ಕೆಡ್ ವಾಣಿಜ್ಯ ಕಟ್ಟಡವನ್ನು ನಿಯಮಾವಳಿಗಳನ್ನು ಗಾಳಿಗೆ ತೂರಿ ನಿರ್ಮಿಸಿದ್ದಲ್ಲದೇ ಇದೀಗ ಈ ವಿವಾದಿತ ಕಟ್ಟಡಕ್ಕೆ ಟ್ರೇಡ್ ಲೈಸನ್ಸನ್ನೂ ನೀಡುವ ಮೂಲಕ ನಗರಸಭೆ ಅಧಿಕಾರಿಗಳು ಭ್ರಷ್ಟಾಚಾರ ಎಸಗಿದ್ದಾರೆ ಎಂದು ದೂರುದಾರ ಮಹಮ್ಮದ್ ಹನೀಫ್ ಹೇಳಿದ್ದಾರೆ.

ಈ ಸಂಬಂಧ ಇಂದು ಸುದ್ದಿಗೋಷ್ಟಿ ನಡೆಸಿದ ಮಹಮ್ಮದ್ ಹನೀಫ್ ಧರಣಿ ಆರ್ಕೇಡ್ ಕಟ್ಟಡಕ್ಕೆ ಮೂರು ಮಹಡಿಯ ಅನುಮತಿ ಇಲ್ಲ.ಹೀಗಿದ್ದರೂ ಮೂರು ಮಹಡಿಯ ಕಟ್ಟಡ ನಿರ್ಮಿಸಲಾಗಿದೆ.ಈ ಸಂಬಂಧ ನಗರಸಭೆಗೆ ತಾನು ದೂರು ನೀಡಿದ್ದೆ.ಬಳಿಕ ನಗರಸಭೆಯವರು ಕಟ್ಟಡದ ಮಾಲಕರಿಗೆ ನೊಟೀಸು ನೀಡಿದ್ದರು.ಕಟ್ಟಡದ ಅಕ್ರಮ ಮಹಡಿಯನ್ನು ತೆರವುಗೊಳಿಸಲು ನಗರಭೆ ನೊಟೀಸು ನೀಡಿದ್ದರೂ ಮಾಲಕರು ನ್ಯಾಯಾಲಯಕ್ಕೆ ಹೋಗಿ ಸ್ಟೇ ತಂದಿದ್ದಾರೆ.

ವ್ಯಾಜ್ಯ ಕೋರ್ಟ್ ನಲ್ಲಿದ್ದರೂ ನಗರಸಭೆಯವರು ಕಂಪ್ಲೀಷನ್ ಗೆ ಅನುಮತಿ ನೀಡಿ ಟ್ರೇಡ್ ಲೈಸನ್ ಅನ್ನೂ ನೀಡಿದ್ದಾರೆ.ಇದು ಅಕ್ರಮ.ತಕ್ಷಣ ಕಟ್ಟಡದ ಟ್ರೇಡ್ ಲೈಸನ್ಸ್ ರದ್ದು ಮಾಡಿ ,ಕಟ್ಟಡ ತೆರವು‌ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ದೂರುದಾರ ಮಹಮ್ಮದ್ ಹನೀಫ್ ಒತ್ತಾಯಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

22/02/2021 12:57 pm

Cinque Terre

6.71 K

Cinque Terre

0

ಸಂಬಂಧಿತ ಸುದ್ದಿ