ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ರಂಗಾಯಣದಿಂದ ನಾಳೆ 'ಪರ್ವ' ಕಾದಂಬರಿಯ ರಂಗಪ್ರಸ್ತುತಿ

ಮಂಗಳೂರು: ಕನ್ನಡದ ಮೇರು ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪನವರ ಬರೋಬ್ಬರಿ 700 ರಷ್ಟು ಪುಟಗಳ ಬೃಹತ್ ಕಾದಂಬರಿ 'ಪರ್ವ' ಮೈಸೂರಿನ ರಂಗಾಯಣದಿಂದ ರಂಗಪ್ರಯೋಗಗೊಳ್ಳುತ್ತಿದೆ. ಮಹಾಭಾರತ ಕಥಾಧಾರಿತ ಈ ನಾಟಕವು ನಾಳೆ ಮಂಗಳೂರಿನಲ್ಲಿ ಪ್ರದರ್ಶನಗೊಳ್ಳಲಿದೆ.

ನಟ, ನಿರ್ದೇಶಕ ಪ್ರಕಾಶ್ ಬೆಳವಾಡಿಯವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ನಾಟಕವು ನಾಳೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಪ್ರಯೋಗಗೊಳ್ಳಲಿದೆ. ಬರೋಬ್ಬರಿ 7 ಗಂಟೆ ಅವಧಿಯ ಈ ರಂಗರೂಪಕ ಬೆಳಗ್ಗೆ 10.30ಯಿಂದ ಸಂಜೆ 7ರವರೆಗೆ ಪ್ರದರ್ಶನಗೊಳ್ಳಲಿದೆ. ಸುದೀರ್ಘ ಅವಧಿಯ ಈ ನಾಟಕದ ನಡುವೆ ಚಹಾ ಹಾಗೂ ಊಟಕ್ಕೆಂದು ನಾಲ್ಕು ವಿರಾಮಗಳಿವೆ.

ರಂಗಾಯಣದ ಹಿರಿಯ 15 ಕಲಾವಿದರು ಸೇರಿ ಸುಮಾರು 40 ಮಂದಿ ಈ ತಂಡದಲ್ಲಿದ್ದಾರೆ. ರಂಗಪ್ರಯೋಗಕ್ಕೆ ಎಲ್ಲಾ ರೀತಿಯಲ್ಲಿ ಪುರಭವನದಲ್ಲಿ ವೇದಿಕೆ ಸಜ್ಜಾಗಿದ್ದು, ನಾಳೆ 'ಪರ್ವ' ನಾಟಕವು ಮಂಗಳೂರಿನ ಪ್ರೇಕ್ಷಕರನ್ನು ರಂಜಿಸಲಿದೆ.

Edited By :
Kshetra Samachara

Kshetra Samachara

09/05/2022 10:27 pm

Cinque Terre

10.22 K

Cinque Terre

0