ಉಡುಪಿ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಡ್ಯಾನ್ಸಿಂಗ್ ಸ್ಟಾರ್ ಕೂಡ ಹೌದು. ಈ ಹಿನ್ನೆಲೆಯಲ್ಲಿ ಉಡುಪಿಯ ಟೀಂ ದರ್ಪಣದ ಹೆಣ್ಣುಮಕ್ಕಳು ಅಗಲಿದ ಅಪ್ಪುವಿಗೆ 'ನೃತ್ಯ ನಮನ' ಸಲ್ಲಿಸಿದರು.
ದರ್ಪಣದಲ್ಲಿ ಈ ಡ್ಯಾನ್ಸ್ ಟ್ರಿಬ್ಯೂಟ್ ಗೆ ವ್ಯವಸ್ಥೆ ಮಾಡಲಾಗಿತ್ತು. ಡ್ಯಾನ್ಸ್ ಅಕಾಡೆಮಿಯ ಉತ್ಸಾಹಿ ಯುವತಿಯರು ಪುನೀತ್ ಹಾಡಿಗೆ ಹೆಜ್ಜೆ ಹಾಕಿದರು. ಗೊಂಬೆ ಹೇಳುತೈತೆ....ಹಾಡಿಗೆ ಆಕರ್ಷಕ ನೃತ್ಯ ಮಾಡುವ ಮೂಲಕ ಪ್ರೀತಿಯ ನಟ ಪುನೀತ್ ಗೆ ನಮನ ಸಲ್ಲಿಸಿದರು.
ಇದಲ್ಲದೆ, ಪುನೀತ್ ರಾಜ್ ಕುಮಾರ್ ಅಭಿನಯದ ಇತರ ಸಿನಿಮಾ ಹಾಡುಗಳಿಗೂ ಇಲ್ಲಿಯ ವಿದ್ಯಾರ್ಥಿನಿಯರು ಸೊಗಸಾಗಿ ಡ್ಯಾನ್ಸ್ ಮಾಡಿ ಗಮನ ಸೆಳೆದರು.
Kshetra Samachara
04/11/2021 07:31 pm