ಮಂಗಳೂರು: ರಿಷಭ್ ಶೆಟ್ಟಿಯವರ 'ಕಾಂತಾರ' ಸಿನಿಮಾ ಸೆ.30ರಂದು ರಿಲೀಸ್ ಆಗಿ ವಿಶ್ವದಾದ್ಯಂತ ಸದ್ದು ಮಾಡುತ್ತಿದೆ. ಎಲ್ಲೆಲ್ಲೂ ಕಾಂತಾರದ ಬಗ್ಗೆಯೂ ಮಾತುಗಳು ಕೇಳೊ ಬರುತ್ತಿದೆ. ಈ ಸಿನಿಮಾ ನಾಯಕಿ 'ಲೀಲಾ' ಪಾತ್ರದಲ್ಲಿ ಸಪ್ತಮಿ ಗೌಡ ಖಡಕ್ ಹೀರೋಯಿನ್ ಇಮೇಜ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಧನಂಜಯ್ ಅಭಿನಯದ ಪಾಪ್ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು ಕಾಂತಾರ ಸಿನಿಮಾದ ಮೂಲಕ ಕನ್ನಡದಲ್ಲಿ ಎರಡನೇ ಸಿನಿಮಾದಲ್ಲಿ ಪಾತ್ರ ಮಾಡಿದ್ದಾರೆ. ಕಾಂತಾರ ಸಿನಿಮಾದ ತಮ್ಮ ಪಾತ್ರದ ಬಗ್ಗೆ ಪಬ್ಲಿಕ್ ನೆಕ್ಸ್ಟ್ ನಲ್ಲಿ ಮಾತನಾಡಿದ ಅವರು 'ಇದು ತಮ್ಮ ಎರಡನೇ ಸಿನಿಮಾ. ಇದರಲ್ಲಿ ತಾನು ಫಾರೆಸ್ಟ್ ಆಫೀಸರ್ ಗಾರ್ಡ್ ಆಗಿ ಕಾಣಿಸಿಕೊಂಡಿದ್ದೇನೆ. ಇದು ಹಾಗೆ ಹೋಗಿ ಬಂದು ಹೋಗುವ ಪಾತ್ರವಲ್ಲ. ನನ್ನ ಪಾತ್ರಕ್ಕೆ ಅದರದ್ದೇ ಆದ ತೂಕ ಇದೆ' ಎಂದು ಹೇಳಿದರು.
ಸಿನಿಮಾ ರಿಲೀಸ್ ಆದ ಬಳಿಕ ನನ್ನ ಲೀಲಾ ಪಾತ್ರ ಹಾಗೂ ಸಿಂಗಾರ ಸಿರಿ ಹಾಡಿಗೆ ಬಹಳಷ್ಟು ಜನರು ಪ್ರೀತಿ ತೋರಿಸುತ್ತಿದ್ದಾರೆ. ಈ ಸಿನಿಮಾಕ್ಕಾಗಿ ನಾನು ಮಂಗಳೂರು ಭಾಷೆಯನ್ನು ಕಲಿತು ಪಾತ್ರಕ್ಕೆ ಡಬ್ಬಿಂಗ್ ಮಾಡಿದ್ದೇನೆ. ಆದರೆ ಪ್ರೇಕ್ಷಕರು ನಾನು ಮಂಗಳೂರು ಹುಡುಗಿ ಅಂತಲೇ ನಂಬಿದ್ದಾರೆ. ಅಷ್ಟು ಚೆನ್ನಾಗಿ ಬಂದಿದೆ ಪಾತ್ರ. ಯಾರೆಲ್ಲಾ ಸಿನಿಮಾ ನೋಡಿಲ್ಲ ಅವರೆಲ್ಲಾ ಮತ್ತೆ ಮತ್ತೆ ಕಾಂತಾರ ಸಿನಿಮಾ ನೋಡಿ' ಎಂದು ಹೇಳಿದರು.
PublicNext
04/10/2022 04:09 pm