ಮಂಗಳೂರು: ಇದೀಗ ತಾನೇ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ದ.ಕ.ಜಿಲ್ಲೆಯಲ್ಲಿ ರಾಜ್ಯಕ್ಕೆ ಐವರು ಟಾಪರ್ ಸ್ಥಾನ ಪಡೆದಿದ್ದಾರೆ. ಈ ಬಾರಿ ದ.ಕ.ಜಿಲ್ಲೆಯು ಶೇಕಡಾವಾರು 90.71 ಫಲಿತಾಂಶ ಪಡೆದಿದೆ.
ಕಳೆದ ವರ್ಷ ದ.ಕ.ಜಿಲ್ಲೆಯು ಶೇ. 88.02 ಫಲಿತಾಂಶ ಪಡೆದು ಪ್ರಥಮ ಸ್ಥಾನ ಗಳಿಸಿತ್ತು. ಈ ಬಾರಿ 90.71 ಶೇಕಡಾ ಫಲಿತಾಂಶ ಪಡೆದು ಮತ್ತೆ ಪ್ರಥಮ ಸ್ಥಾನವನ್ನು ಉಳಿಸಿಕೊಂಡಿದೆ. ಈ ಬಾರಿ ವಾಣಿಜ್ಯ ವಿಭಾಗದಲ್ಲಿ ಮೂವರು, ವಿಜ್ಞಾನ ವಿಭಾಗದಲ್ಲಿ ಇಬ್ಬರು ಟಾಪರ್ ಗಳಾಗಿದ್ದಾರೆ. ಕಲಾ ವಿಭಾಗದಲ್ಲಿ ಯಾರೂ ಟಾಪರ್ ಗಳಿಲ್ಲ.
ಮೂಡುಬಿದಿರೆಯ ಆಳ್ವಾಸ್ ಪಿಯು ಕಾಲೇಜಿನ ಸಮರ್ಥ್ ವಿಶ್ವಾಸ್ ಜೋಶಿ(595), ಮಂಗಳೂರಿನ ಸಂತ ಅಲೋಶಿಯಸ್ ಪಿಯು ಕಾಲೇಜಿನ ಅನೀಶ್ ಮಲ್ಯ(595), ಕೆನರಾ ಪಿಯು ಕಾಲೇಜಿನ ಅಚಲ್ ಪ್ರವೀಣ್ ಉಳ್ಳಾಲ್(595) ಅಂಕ ಗಳಿಸಿ ವಾಣಿಜ್ಯ ವಿಭಾಗದಲ್ಲಿ ಟಾಪರ್ ಗಳಾಗಿದ್ದಾರೆ.
ಅದೇ ರೀತಿ ವಿಜ್ಞಾನ ವಿಭಾಗದಲ್ಲಿ ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ಇಲಮ್(597), ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಕೃಷ್ಣ ಪೆಜತ್ತಾಯ(597) ಅಂಕ ಗಳಿಸಿ ರಾಜ್ಯಕ್ಕೆ ಟಾಪರ್ ಗಳಾಗಿದ್ದಾರೆ.
Kshetra Samachara
18/06/2022 04:23 pm