ಮೂಡುಬಿದಿರೆ : ರಾಜ್ಯದಲ್ಲಿ ಭರತನಾಟ್ಯ ಕಲಿಯುವವರ ಸಂಖ್ಯೆ ಹೆಚ್ಚಿದೆ. ನೃತ್ಯ ತರಬೇತಿ ನೀಡುವ ಸಂಸ್ಥೆಗಳೂ ಹೆಚ್ಚಿವೆ. ಭರತನಾಟ್ಯ ಕಲಿಕೆಗೆ ಪೂರಕವಾದ ಕೃತಿಗಳು ತೆಲುಗು, ತಮಿಳಿನಲ್ಲಿದ್ದು ಕನ್ನಡಕ್ಕೆ ಭಾಷಾಂತರಗೊಂಡಿದ್ದರೂ ಕಲಿಸುವ ಗುರುಗಳು ಕನ್ನಡಕ್ಕೆ ಆದ್ಯತೆ ನೀಡುತ್ತಿಲ್ಲ ಕನ್ನಡದಲ್ಲೇ ಕಲಿಸುವಂತಾದರೆ ಕಲಿಯುವವರಿಗೂ, ಆಸಕ್ತಿ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.
ನಾರಾಯಣಗುರು ಸಭಾಭವನದಲ್ಲಿ ನಡೆದ ಭಾವನಾ ಬಾಲಕೃಷ್ಣ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕಾರ್ಯಡಕ್ರಮವನ್ನು ಉದ್ಘಾಟಿಸಿದ ನೃತ್ಯನಿಕೇತನದ ಗುರು ಉಳ್ಳಾಲ ಮೋಹನಕುಮಾರ್ ಮಾತನಾಡಿ ರಂಗಪ್ರವೇಶವೆಂಬುದು ಭರತನಾಟ್ಯದಲ್ಲಿ ಮಾತ್ರ ಇದೆ. ಗುರುಗಳಲ್ಲಿ ಕಲಿತು ಪರಿಪೂರ್ಣವಾದ ಬಳಿಕ ಅವರ ಅನುಮತಿಯೊಂದಿಗೆ ರಂಗಪ್ರವೇಶ ಮಾಡಲು ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ಎಸ್ಕೆಎಫ್ ಎಲಿಕ್ಸರ್ ಇಂಡಿಯಾದ ಆಡಳಿತ ನಿರ್ದೇಶಕ ಜಿ.ರಾಮಕೃಷ್ಣ ಆಚಾರ್, ವಿಶ್ವಕಲಾನಿಕೇತನದ ವಿದುಷಿ ನಯನ ವಿ.ರೈ ಭಾಗವಹಿಸಿ ಶುಭ ಹಾರೈಸಿದರು.
Kshetra Samachara
10/05/2022 05:55 pm