ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಹಿಜಾಬ್ ಗೆ ಅವಕಾಶ ಕೊಟ್ಟರೆ, ಎಲ್ಲ ಕಾಲೇಜುಗಳಲ್ಲಿ ಕೇಸರಿ ಶಾಲು; ಹಿಂಜಾವೇ

ಉಡುಪಿ: ಶಾಲೆ- ಕಾಲೇಜುಗಳಲ್ಲಿ ಸಮವಸ್ತ್ರ- ಸಮಾನತೆ ಇರಬೇಕು ಎಂದು ಹೇಳಿರುವ ಹಿಂದೂ ಜಾಗರಣ ವೇದಿಕೆಯು ಹಿಜಾಬ್ ಗೆ ಅವಕಾಶ ಕೊಟ್ಟರೆ, ಎಲ್ಲ ಶಾಲೆ- ಕಾಲೇಜುಗಳಲ್ಲಿಯೂ ಕೇಸರಿ ಶಾಲು ಹಾಕಿಸುತ್ತೇವೆ ಎಂದು ಹೇಳಿದೆ.

ಇವತ್ತು ಹಿಜಾಬ್ ವಿವಾದದ ಕೇಂದ್ರಬಿಂದುವಾಗಿರುವ ಕಾಲೇಜಿಗೆ ಭೇಟಿ ನೀಡಿದ ಹಿಂಜಾವೇ ಮುಖಂಡ ಪ್ರಕಾಶ್ ಕುಕ್ಕೆಹಳ್ಳಿ , ಈಗ ಹಿಜಾಬ್ ಗೆ ಅವಕಾಶ ಕೊಟ್ಟರೆ ಮುಂದೆ

ಬುರ್ಖಾ, ಟೋಪಿಗಾಗಿ ಬೇಡಿಕೆ ಇಡುತ್ತಾರೆ. ಶರಿಯತ್ ಕಾನೂನು ಕೇಳುತ್ತಾರೆ.

ಮತೀಯ ಸಂಘಟನೆಯೊಂದು ವಿದ್ಯಾರ್ಥಿಗಳಲ್ಲಿ ವಿಷಬೀಜ ಬಿತ್ತುತ್ತಿವೆ.

ದೇಶದ ಮಾನ ಹರಣಕ್ಕೆ ಅಂತಾರಾಷ್ಟ್ರೀಯ ಷಡ್ಯಂತ್ರ ನಡೆಯುತ್ತಿದೆ. ಉಡುಪಿಯ ಶೈಕ್ಷಣಿಕ ಖ್ಯಾತಿ ಕುಗ್ಗಿಸಲು ಕುತಂತ್ರ ನಡೆಯುತ್ತಿದೆ. ಆದರೆ,

ಶೈಕ್ಷಣಿಕ ವಾತಾವರಣ ಕೆಡಿಸಲು ಹಿಂದೂ ಜಾಗರಣಾ ವೇದಿಕೆ ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.

Edited By : Shivu K
Kshetra Samachara

Kshetra Samachara

21/01/2022 06:29 pm

Cinque Terre

21.57 K

Cinque Terre

4

ಸಂಬಂಧಿತ ಸುದ್ದಿ