ಮುಲ್ಕಿ:ಮುಲ್ಕಿ ಸಮೀಪದ ಪಡಪಣಂಬೂರು ಕಲ್ಲಾಪು ಶ್ರೀಮತಿ ಜಾನಕಿ ರವರ ಮನೆಯಲ್ಲಿ ಹಲವಾರು ವರ್ಷಗಳಿಂದ ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಮೂವರು ಪುತ್ರಿಯರ ವಿದ್ಯಾಭ್ಯಾಸಕ್ಕೆ ತೀವ್ರ ತೊಂದರೆಯಾಗಿತ್ತು.
ಕೂಡಲೇ ಕಾರ್ಯಪ್ರವೃತ್ತರಾದ ಮುಲ್ಕಿಯ ಕಾರ್ನಾಡು ಶ್ರೀ ರಾಮ ಸೇವಾ ಮಂಡಳಿ ಅಧ್ಯಕ್ಷ ಭಾಸ್ಕರ್ ಶೆಟ್ಟಿಗಾರ್ ರವರು ಪಡಪಣಂಬೂರು ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಅವರಿಗೆ ಮಾಹಿತಿ ನೀಡಿ ಮನೆ ನಂಬರ್ ಪಡೆದು ಬಳಿಕ ಮೆಸ್ಕಾಂ ಉದ್ಯೋಗಿ ಹರೀಶ್ ಮತ್ತು ಗುತ್ತಿಗೆದಾರರಾದ ನರಸಿಂಹ ರವರ ಸಹಕಾರ ಪಡೆದು ತಮ್ಮ ಸದಸ್ಯರೊಡಗೂಡಿ ವಿದ್ಯುತ್ ಸಂಪರ್ಕ ನೀಡಿದ್ದಾರೆ.
ಈ ಸಂದರ್ಭ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಸದಸ್ಯರಾದ ಹರಿಪ್ರಸಾದ್ ರೋಟರಿ ಮಾಜೀ ಅಧ್ಯಕ್ಷ ಅಶೋಕ್ ಶೆಟ್ಟಿ ಚಿತ್ರಾಪು ಬೂತ್ ಅಧ್ಯಕ್ಷ ವೆಂಕಟೇಶ್ ಮತ್ತು ಶ್ರೀ ರಾಮ ಸೇವಾ ಮಂಡಳಿಯ ಕಾರ್ಯದರ್ಶಿ ದಿನೇಶ್ ಶೆಟ್ಟಿ ಕುಬೆವೂರು ಹಾಗೂ ಸದಸ್ಯರಾದ ಕೇಶವ್ ಸುವರ್ಣ,ಶಿವಾನಂದ,ಮಾಧವ್,ದೇವದಾಸ್ ಮತ್ತು ಗುತ್ತಿಗೆದಾರ ನರಸಿಂಹ ರವರೊಂದಿಗೆ ವಿಜಯದಶಮಿ ಶುಭದಿನದಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
Kshetra Samachara
17/10/2021 06:13 am