ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್ : ಮಕ್ಕಳ ಕೈಯ್ಯಲ್ಲಿದ್ದ ರಕ್ಷೆಯನ್ನು ಕಿತ್ತು ಕಸದ ಬುಟ್ಟಿಗೆ ಎಸೆದ ಶಾಲಾ ಶಿಕ್ಷಕರು!!

ಸುರತ್ಕಲ್: ಸನಾತನ ಧರ್ಮದ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ರಕ್ಷಾ ಬಂಧನ ದಿನದಂದು ಕಾಟಿಪಳ್ಳ-ಗಣೇಶಪುರ ಸಮೀಪದ "ಸೆಕ್ರೇಡ್ ಹಾರ್ಟ್ ಚರ್ಚ್ ಶಾಲೆ"ಯಲ್ಲಿ ಶಿಕ್ಷಕರೇ ಪುಟ್ಟ ಮಕ್ಕಳ ಕೈಯ್ಯಲ್ಲಿದ್ದ ರಕ್ಷೆಯನ್ನು ಕಿತ್ತು ಕಸದ ಬುಟ್ಟಿಗೆ ಎಸೆದ ಘಟನೆ ನಡೆದಿದೆ!

ಸಹಜವಾಗಿ ಪೋಷಕರು, ಸ್ಥಳೀಯರು, ಹಿಂದೂ ಸಂಘಟನೆಗಳು ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪೋಷಕರು ಮಾತನಾಡಿ "ಚೈಲ್ಡ್ ಕೇರ್ ಸಂಸ್ಥೆ" ಯವರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಮಕ್ಕಳ ಜೊತೆ ಸಮಾಲೋಚನೆ ನಡೆಸಬೇಕು.

ಸ್ಥಳೀಯ ಜನಪ್ರತಿನಿಧಿಗಳು,ಪೊಲೀಸರು ಹಾಗೂ ಶಿಕ್ಷಣ ಇಲಾಖೆ, ಮಧ್ಯಪ್ರವೇಶಿಸಿ ಸಂಬಂಧಪಟ್ಟ ಆಡಳಿತ ಮಂಡಳಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ

Edited By :
PublicNext

PublicNext

12/08/2022 10:16 am

Cinque Terre

42.38 K

Cinque Terre

60

ಸಂಬಂಧಿತ ಸುದ್ದಿ