ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು ವಿವಿ ಕಾಲೇಜಿನಲ್ಲಿ ಹಿಜಾಬ್ ಕಿಚ್ಚು: ಪ್ರಾಂಶುಪಾಲೆ, ವಿದ್ಯಾರ್ಥಿ ನಾಯಕ ಹೇಳಿದ್ದೇನು?

ಮಂಗಳೂರು: ನಗರದ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಕ್ಯಾಂಪಸ್ ನಲ್ಲಿ ನಿನ್ನೆ ಏಕಾಏಕಿ ಎದ್ದಿರುವ ಹಿಜಾಬ್ ವಿವಾದದ ವಿಚಾರ ಭಾರೀ ಮಟ್ಟದಲ್ಲಿ ಸುದ್ದಿಯಾಗಿದೆ. ಇಂದು ಈ ಬಗ್ಗೆ ಪ್ರಾಂಶುಪಾಲೆ ಡಾ.ಅನುಸೂಯ ರೈ ಸ್ಪಷ್ಟನೆ ನೀಡಿ, ಮಂಗಳೂರು ವಿವಿಯ ಸಿಂಡಿಕೇಟ್ ಸಭೆಯಲ್ಲಿ ಯಾರೂ ವಿದ್ಯಾರ್ಥಿನಿಯರು ಶಿರವಸ್ತ್ರ ಧರಿಸದಂತೆ ನಿರ್ಣಯಿಸಲಾಗಿತ್ತು. ಇದನ್ನು ವಿದ್ಯಾರ್ಥಿನಿಯರ ಗಮನಕ್ಕೂ ತರಲಾಗಿದೆ ಎಂದು ಹೇಳಿದರು.

ಮೇ 16 ರಂದು ಮಂಗಳೂರು ವಿವಿ ಸಿಂಡಿಕೇಟ್ ಸಭೆಯಲ್ಲಿ ವಿವಿ ಘಟಕದ ಎಲ್ಲಾ ಕಾಲೇಜುಗಳಲ್ಲಿ ಸಮವಸ್ತ್ರ ನಿಯಮವನ್ನು ಕಡ್ಡಾಯಗೊಳಿಸಲಾಗಿತ್ತು. ಅಲ್ಲದೆ ಹಿಂದೆ ಕಾಲೇಜು ಪ್ರಾಸ್ಪೆಕ್ಟಸ್ ನಲ್ಲಿ ಶಿರವಸ್ತ್ರ ಧರಿಸಬಹುದೆಂಬ ನಿಯಮವನ್ನು ತೆಗೆದುಹಾಕಲಾಗಿತ್ತು. ಆದ್ದರಿಂದ ವಿದ್ಯಾರ್ಥಿಯರು ಶಿರವಸ್ತ್ರ ಧರಿಸಿ ತರಗತಿಗೆ ಹಾಜರಾಗಬಾರದೆಂದು ನಿರ್ಣಯಗೊಳಿಸಲಾಗಿತ್ತು. ಈ ನಿಯಮಗಳನ್ನು ಮರುದಿನದಿಂದಲೇ ಕಡ್ಡಾಯವಾಗಿ ಜಾರಿಗೆ ತರಲಾಗಿದೆ. ಇದನ್ನು ಸೂಚನಾ ಫಲಕ, ಧ್ವನಿವರ್ಧಕದಲ್ಲಿಯೂ ವಿದ್ಯಾರ್ಥಿಗಳ ಗಮನಕ್ಕೆ ತರಲಾಗಿದೆ. ಆದ್ದರಿಂದ ವಿದ್ಯಾರ್ಥಿಯರು ವಿಶ್ರಾಂತಿ ಕೊಠಡಿಗೆ ತೆರಳಿ ಅಲ್ಲಿ ಶಿರವಸ್ತ್ರ ತೆಗೆದು ತರಗತಿಗೆ ಹಾಜರಾಗಬಹುದು. ಈ ನಿಯಮಗಳನ್ನು ಉಲ್ಲಂಘಿಸಿದವರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುತ್ತದೆ. ನನಗೆ ಈ ವಿಚಾರದಲ್ಲಿ ಯಾವ ಶಾಸಕರ ಒತ್ತಡವೂ ಬಂದಿಲ್ಲ. ನಾನು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿಭಾಯಿಸಲು ಯತ್ನಿಸಿದ್ದೇನೆ ಎಂದು ಹೇಳಿದರು.

ಕಾಲೇಜು ವಿದ್ಯಾರ್ಥಿ ನಾಯಕ ವಿನ್ಯಾಸ್ ಮಾತನಾಡಿ, ನಾನು ಹಿಜಾಬ್ ಪರವಾಗಿಲ್ಲ. ಅದರ ವಿರುದ್ಧವಾಗಿಯೇ ಇದ್ದೇನೆ. ಆದರೆ ಹಿಜಾಬ್ ಅನ್ನು ತರಗತಿಯಲ್ಲಿ ಧರಿಸುವಂತಿಲ್ಲ ಎಂದು ಪ್ರಾಂಶುಪಾಲರಲ್ಲಿ ಒತ್ತಡ ಹೇರುತ್ತಿಲ್ಲ ಎಂಬ ಕಾರಣಕ್ಕೆ ನನ್ನ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ. ನಿನ್ನೆ ನಡೆದಿರೋದು ನನ್ನ ವಿರುದ್ಧದ ಪ್ರತಿಭಟನೆ ಅಲ್ಲದಿದ್ದಲ್ಲಿ ನಾನೂ ಹಿಜಾಬ್ ವಿರುದ್ಧವಾಗಿ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದೆ. ಇದೀಗ ನಾನು ಕಾಲೇಜು ವಿದ್ಯಾರ್ಥಿ ನಾಯಕನ ಸ್ಥಾನಕ್ಕೆ ಸ್ವಇಚ್ಛೆಯಿಂದ ರಾಜಿನಾಮೆ ನೀಡುತ್ತಿದ್ದೇನೆ ಎಂದು ಹೇಳಿದರು.

Edited By :
PublicNext

PublicNext

27/05/2022 03:38 pm

Cinque Terre

45.77 K

Cinque Terre

0

ಸಂಬಂಧಿತ ಸುದ್ದಿ