ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಶಾಲೆಗಳು 16ರಿಂದಲೇ ಪ್ರಾರಂಭ: ಶಿಕ್ಷಣ ಸಚಿವ ನಾಗೇಶ್

ಬಂಟ್ವಾಳ: ಮಕ್ಕಳ ಶೈಕ್ಷಣಿಕ ಗುಣಮಟ್ಟ ವೃದ್ಧಿಸಲು ಶಾಲೆಯನ್ನು ಕಲಿಕಾ ಚೇತರಿಕೆಯ ದೃಷ್ಟಿಯಿಂದ ಶಾಲೆಯನ್ನು ಮೇ 16ರಿಂದ ಆರಂಭಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

ಬಂಟ್ವಾಳದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತು ಕಲಿಕಾ ಚೇತರಿಕೆ ಕುರಿತು ಕೇಂದ್ರದ ಶಿಕ್ಷಣ ಸಚಿವರೂ ಮೆಚ್ಚುಗೆ ವ್ಯಕ್ತಪಡಿಸಿದ್ಧಾರೆ. ಒಂಬತ್ತು ತಿಂಗಳನ್ನು ಮೂರು ಭಾಗಗಳನ್ನಾಗಿ ಮಾಡಿ ಕಲಿಕೆಯನ್ನು ಮಾಡಲಾಗುವುದು. ಅಕ್ಷರ ಸಂಖ್ಯೆಯ ಜ್ಞಾನ ವೃದ್ಧಿಸುವ ಪ್ರಯತ್ನ, ಸಿಲೆಬಸ್ ಕಡಿಮೆ ಮಾಡಿ ಅದನ್ನು ಕೊಡುವ ಪ್ರಯತ್ನ ಮಾಡಲಾಗುವುದು ಎಂದರು.

ಶಾಲಾ ಪಠ್ಯಪುಸ್ತಕಗಳನ್ನು ಶೀಘ್ರ ವಿತರಿಸುವ ವ್ಯವಸ್ಥೆಗಳ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಆಂಗ್ಲ ಮಾಧ್ಯಮದೊಂದಿಗೆ ಮಾತೃಭಾಷೆಯ ಶಿಕ್ಷಣಕ್ಕೂ ಒತ್ತು ಕೊಡಬೇಕು ಎಂಬ ದೃಷ್ಟಿಯಿಂದ ಅದಕ್ಕೂ ಕ್ರಮ ಕೈಗೊಳ್ಳಲಾಗುತ್ತದೆ. ಆಂಗ್ಲ ಮಾಧ್ಯಮ ಕಲಿಕೆಗೆ ಪೂರಕವಾಗಿ ಅದಕ್ಕೆ ನುರಿತ ಶಿಕ್ಷಕರನ್ನು ನೇಮಿಸಲಾಗುತ್ತದೆ ಎಂದರು. ರಾಜ್ಯದಲ್ಲಿ 27 ಸಾವಿರ ಅತಿಥಿ ಶಿಕ್ಷಕರ ನೇಮಕಾತಿ ಮಾಡುವ ಮೂಲಕ ಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನಗಳನ್ನು ಮಾಡಲಾಗುತ್ತದೆ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Edited By : Manjunath H D
PublicNext

PublicNext

07/05/2022 10:49 pm

Cinque Terre

43.4 K

Cinque Terre

0

ಸಂಬಂಧಿತ ಸುದ್ದಿ