ಉಡುಪಿ: ಪ್ರಸಿದ್ಧ ಯಕ್ಷಗಾನ ತರಬೇತುದಾರ ಬನ್ನಂಜೆ ಸಂಜೀವ ಸುವರ್ಣರ ನೇತೃತ್ವದ ಯಕ್ಷ ಸಂಜೀವ ಯಕ್ಷಗಾನ ಕೇಂದ್ರದ ಉದ್ಘಾಟನೆ ಅ.10ರಂದು ಸೋಮವಾರ ಸಂಜೆ 5 ಗಂಟೆಗೆ ಜರುಗಲಿದೆ.
ಡಾ.ಕೋಟ ಶಿವರಾಮ ಕಾರಂತರ ಜನ್ಮದಿನದಂದೇ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥ ಶ್ರೀಪಾದರು ಈ ಹೊಸ ಯಕ್ಷಗಾನ ತರಬೇತಿ ಸಂಸ್ಥೆಯನ್ನು ಉದ್ಘಾಟಿಸುವರು. ತಿಂಗಳೆ ಪ್ರತಿಷ್ಠಾನದ ಅಧ್ಯಕ್ಷ, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ಕೆ. ರಘುಪತಿ ಭಟ್ ಶುಭಾಶಂಸನೆ ಮಾಡುವರು.
ಯಕ್ಷಗಾನ ಕೇಂದ್ರ ಉಡುಪಿ ಇದರ ವಿಶ್ರಾಂತ ನಿರ್ದೇಶಕ ಪ್ರೊ.ಹೆರಂಜೆ ಕೃಷ್ಣ ಭಟ್, ಪ್ರಸಿದ್ಧ ಮೂಳೆ ತಜ್ಞ ಡಾ.ಭಾಸ್ಕರಾನಂದಕುಮಾರ್, ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಎಂಜಿಎಂ ಕಾಲೇಜಿನಿಂದ ಬುಡ್ನಾರು ರಸ್ತೆಯಲ್ಲಿರುವ ಸಂಜೀವ ಸುವರ್ಣರ ಸ್ವಗೃಹ 'ಗುರುದಕ್ಷಿಣೆ'ಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
Kshetra Samachara
08/10/2022 08:51 pm