ಮುಲ್ಕಿ: ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸ್ಮಾರಕ ಟ್ರಸ್ಟ್ ನ ಹಾಗೂ ಅರ್ಚಕ ಲಕ್ಷ್ಮೀನಾರಾಯಣ ಅಸ್ರಣ್ಣ ಆಶ್ರಯದಲ್ಲಿ ಕಟೀಲು ದಿ.ಗೋಪಾಲಕೃಷ್ಣ ಆಸ್ರಣ್ಣರ ಸಂಸ್ಮರಣೆಯ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ದೇರಳಕಟ್ಟೆ ನಿಟ್ಟೆ ವಿ ವಿ ಯ ಕುಲಪತಿ ಡಾ.ಬಿ ಸತೀಶ್ ಕುಮಾರ್ ಭಂಡಾರಿ ವಹಿಸಿ ಮಾತನಾಡಿ ಕಟೀಲು ಕ್ಷೇತ್ರಕ್ಕೆ ದಿ.ಗೋಪಾಲಕೃಷ್ಣ ಆಸ್ರಣ್ಣರವರ ಕೊಡುಗೆ ಅನನ್ಯವಾಗಿದ್ದು ಅವರ ಆದರ್ಶಗಳನ್ನು ಇಂದಿನ ಯುವ ಜನಾಂಗ ಪಾಲಿಸಬೇಕಾಗಿದೆ ಎಂದರು.
ಅದಮಾರು ಮಠದ ದಿವಾನ ಲಕ್ಷ್ಮೀ ನಾಯರಾಯಣ ಮುಚ್ಚಿಂತಾಯ ಸಂಸ್ಮರಣಾ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಮಂಗಳೂರು ಕದ್ರಿ ಆಸ್ರಣ್ಣ ಅಭಿಮಾನಿ ಬಳಗ ವತಿಯಿಂದ ನೀಡಲ್ಪಡುವ ದಿ.ಗೋಪಾಲಕೃಷ್ಣ ಪ್ರಶಸ್ತಿಯನ್ನು ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯರಿಗೆ ನೀಡಿ ಗೌರವಿಸಲಾಯಿತು ಅರ್ಚಕ ಪ್ರಶಸ್ತಿಯನ್ನು ಉಡುಪಿ ಪಾಜಕ ಕ್ಷೇತ್ರದ ಪ್ರಧಾನ ಅರ್ಚಕ ಬ್ರಹ್ಮಶ್ರೀ ಮಾಧವ ಉಪಾಧ್ಯಾಯರಿಗೆ ಹಾಗೂ ಮೊಕ್ತೇಸರ ಪ್ರಶಸ್ತಿಯನ್ನು ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ತಾನದ ಅನುವಂಶಿಕ ಧರ್ಮದರ್ಶಿ ಎಸ್ ಸಚ್ಚಿದಾನಂದ ಛಾತ್ರರಿಗೆ ನೀಡಿ ಸನ್ಮಾನಿಸಲಾಯಿತು.
ಶೋಭಿತ ಭಟ್, ಸ್ವಾತಿ, ಧನ್ಯಶ್ರೀ , ರವರಿಗೆ ಪ್ರತಿಭಾ ಪುರಸ್ಕಾರ ಕಟೀಲು ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಕುಸುಮಾವತಿ, ಉರಗತಜ್ಞ ಯತೀಶ್ ಶೆಟ್ಟಿ, ರವರನ್ನು ಅಭಿನಂದಿಸಲಾಯಿತು.
ಮಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ಪಡೆದ ಧರ್ಮದರ್ಶಿ ಹರಿಕೃಷ್ಣ ಪುನರೂರು ರವರನ್ನು ಪತ್ನಿ, ಉಷಾ ರವರ ಜೊತೆ ಗೌರವಿಸಲಾಯಿತು. ಶರವು ಶ್ರೀ ಮಹಾಗಣಪತಿ ದೇವಸ್ತಾನದ ಶರವು ರಾಘವೇಂದ್ರ ಶಾಸ್ತ್ರಿಯವರು ಶುಭಾಶಂಸನೆಗೈದರು. ಬಳಿಕ ಗೋವರ್ಧನೋದ್ದರಣ, ಭಕ್ತ ಸುಧಾಮ, ಸುಂದ-ಉಪಸಂದ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು.
Kshetra Samachara
19/09/2022 11:12 am