ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಲ್ಲಂಜೆ: ಕಟ್ಟಡ ಕಾರ್ಮಿಕರ ಉಚಿತ ಅರೋಗ್ಯ ತಪಾಸಣೆ, ವೈದ್ಯಕೀಯ ಶಿಬಿರ

ಮುಲ್ಕಿ: ಗ್ರಾಮ ಒನ್ ಕೆಮ್ರಾಲ್ ಸಹಕಾರದಿಂದ ರಾಜ್ಯ ಸರಕಾರದ ಮಾನ್ಯತೆ ಪಡೆದ ಬ್ಲಾಸಮ್ ಎಂಎಂಯು ಮಂಗಳೂರು ಸಹಯೋಗದೊಂದಿಗೆ ಕಟ್ಟಡ ಕಾರ್ಮಿಕರ ಉಚಿತ ಅರೋಗ್ಯ ತಪಾಸಣೆ ಮತ್ತು ಔಷಧೀಯ ಉಪಚಾರ ಶಿಬಿರ ಕಿನ್ನಿಗೋಳಿ ಸಮೀಪದ ಉಲ್ಲಂಜೆಯ ಮುಂಚಿಕಾಡುವಿನಲ್ಲಿ ನಡೆಯಿತು.

ಶಿಬಿರಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ರವರು ಭೇಟಿ ನೀಡಿ ಅರೋಗ್ಯ ತಪಾಸಣೆ ಮಾಡಿಸಿಕೊಂಡರು.

ಒಟ್ಟು 52 ಜನರು ಕಾರ್ಯಕ್ರಮದ ಪ್ರಯೋಜನ ಪಡಕೊಂಡರು. ಕಾರ್ಯಕ್ರಮದಲ್ಲಿ ಜನಾರ್ಧನ್ ಕಿಲೆಂಜೂರು, ಗ್ರಾಮ ಒನ್ ಕೇಂದ್ರದ ಲಕ್ಷ್ಮಿ ನಾರಾಯಣ ಮತ್ತು ಸಂಚಾರಿ ಘಟಕದ ವೈದ್ಯರು ಮತ್ತು ಅನಂತ್ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

10/09/2022 07:02 pm

Cinque Terre

2.54 K

Cinque Terre

0

ಸಂಬಂಧಿತ ಸುದ್ದಿ