ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ತುಳುಕೂಟ ಉಡುಪಿ ಅಧ್ಯಕ್ಷರಾಗಿ ಬಿ.ಜಯಕರ ಶೆಟ್ಟಿ ಇಂದ್ರಾಳಿ ಪುನರಾಯ್ಕೆ

ಉಡುಪಿ: ಸಾಂಸ್ಕೃತಿಕ ಕಲಾಸಂಸ್ಥೆ ತುಳುಕೂಟ ಉಡುಪಿ ಇದರ 2022-23ನೇ ನೂತನ ಅಧ್ಯಕ್ಷರಾಗಿ ಬಿ.ಜಯಕರ ಶೆಟ್ಟಿ ಇಂದ್ರಾಳಿ ಪುನರಾಯ್ಕೆ ಯಾಗಿದ್ದಾರೆ.

ಉಡುಪಿಯ ಜಗನ್ನಾಥ ಸಭಾಭವನದಲ್ಲಿ ನಡೆದ ತುಳುಕೂಟದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ದಿವಾಕರ ಸನಿಲ್ ಹಾಗೂ ಸದಾಶಿವ ಭಟ್, ಪ್ರಧಾನ ಕಾರ್ಯದರ್ಶಿಯಾಗಿ ಗಂಗಾಧರ ಕಿದಿಯೂರ್, ಜತೆಕಾರ್ಯದರ್ಶಿಗಳಾಗಿ ಮೋಹನ್ ಶೆಟ್ಟಿ ಮೂಡನಿ ಡಂಬೂರು, ಉದಯಕುಮಾರ್, ರಶ್ಮಿ ರಮೇಶ್ ಶೆಣೈ, ಕೋಶಾಧಿಕಾರಿಯಾಗಿ ಎಂ.ಜಿ.ಚೈತನ್ಯ, ಸಂಘಟನಾ ಕಾರ್ಯದರ್ಶಿಗಳಾಗಿ ಮನೋಹರ್ ಶೆಟ್ಟಿ ತೋನ್ಸೆ, ಸಂತೋಷ್ ಕುಮಾರ್, ಆಂತರಿಕ ಲೆಕ್ಕಪರಿ ಶೋಧಕರಾಗಿ ಯು.ಜೆ.ದೇವಾಡಿಗ ಆಯ್ಕೆಯಾದರು.

ತುಳು ಮಿನದನ ಕಾರ್ಯಕ್ರಮ ಸಂಚಾಲಕ ರಾಗಿ ಡಾ.ಯಾದವ ವಿ. ಕರ್ಕೇರ, ಕೆತ್ತೂರು ನಾಟಕ ಸ್ಪರ್ಧೆ ಸಂಚಾಲಕರಾಗಿ ಪ್ರಭಾಕರ ಭಂಡಾರಿ, ನಿಟ್ಟೂರು ತುಳು ಭಾವಗೀತೆ ಸ್ಪರ್ಧೆ ಸಂಚಾಲಕರಾಗಿ ಪ್ರಕಾಶ್ ಸುವರ್ಣ ಕಟಪಾಡಿ, ಪಣಿಯಾಡಿ ಕಾದಂಬರಿ ಸ್ಪರ್ಧೆ ಸಂಚಾಲಕರಾಗಿ ಶಿಲ್ಪಾ ಜೋಷಿ, ಮದರಂಗಿದ ರಂಗ್ ಸ್ಪರ್ಧೆ ಸಂಚಾಲಕರಾಗಿ ಯಶೋಧಾ ಕೇಶವ್, ಆಟಿದ ಕಷಾಯ ಕಾರ್ಯಕ್ರಮ ಎಸ್.ವಿ.ಭಟ್, ಡಾ.ಗಣನಾಥ ಎಕ್ಕಾರ್ ಹಾಗೂ 15 ಮಂದಿ ವಿಶೇಷ ಆಹ್ವಾನಿತರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Edited By : PublicNext Desk
Kshetra Samachara

Kshetra Samachara

07/09/2022 03:48 pm

Cinque Terre

956

Cinque Terre

0

ಸಂಬಂಧಿತ ಸುದ್ದಿ