ಉಡುಪಿ: ಕರಾವಳಿಯ ಸುಂದರಿ ದಿವಿತಾ ರೈ ಪ್ರತಿಷ್ಠಿತ ಲಿವಾ ಮಿಸ್ ದಿವಾ ಯೂನಿವರ್ಸ್ ಆಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಸೆ.6 ಮತ್ತಯ 7ರಂದು ಕರಾವಳಿ ಜಿಲ್ಲೆಗಳಿಗೆ ಆಗಮಿಸುವ ಜತೆಯಲ್ಲಿ ಸಾರ್ವಜನಿಕ ಸನ್ಮಾನ, ಅಭಿನಂದನೆ ಕಾಠ್ಯಕ್ರಮಗಳ ಜತೆಗೆ ಉಡುಪಿ ಶ್ರೀಕೃಷ್ಣ ಮಠ, ದೈವ, ದೇವಸ್ಥಾನಗಳಿಗೆ ಭೇಟಿ ನೀಡಲಿದ್ದಾರೆ.
ಸೆ.6ರಂದು ಸಂಜೆ 4ಕ್ಕೆ ಮಂಗಳೂರಿಗೆ ಬರುವ ದಿವಿತಾ ರೈ ಅವರಿಗೆ ಬಂಟರ ಯಾನೆ ನಾಡವರ ಮಾತೃಸಂಘ ಮಂಗಳೂರು ಹಾಗೂ ಶ್ರೀರಾಮಕೃಷ್ಣ ವಿದ್ಯಾರ್ಥಿನಿ ಭವನ ಅಮೃತೋತ್ಸವ ಸಮಿತಿ ವತಿಯಿಂದ ಸಾರ್ವಜನಿಕ ಸನ್ಮಾನ ಬಂಟ್ಸ್ ಹಾಸ್ಟೆಲ್‌ನ ಗೀತಾ ಎಸ್. ಎಂ.ಶೆಟ್ಟಿ ಸಭಾಭವನದಲ್ಲಿ ನಡೆಯಲಿದೆ.
Kshetra Samachara
05/09/2022 04:16 pm