ಉಡುಪಿ: ಕಲಾವಿದರ ಬದುಕು ಸಮಾಜಕ್ಕೆ ಅದ್ಭುತ ಕೊಡುಗೆಯಾಗಿದೆ. ಪಿ.ಎನ್ ಆಚಾರ್ಯ ಅವರ 50 ವರ್ಷಗಳ ಬದುಕು, ಕಲಾ ಜೀವನ, ಸ್ವದೇಶಿ ಚಿಂತನೆ, ಸಂಪ್ರದಾಯಿಕ ಆಲೋಚನೆ, ಆಧುನಿಕ ವಿಚಾರಗಳು ಮಾದರಿಯಾಗಿವೆ. ಅವರ ಕೃತಿಗಳ ಕಲಾಸಿರಿ ಬಿಡುಗಡೆ ಆಗಿರುವುದು ಅಭಿನಂದನೀಯ ಎಂದು ಡಾ. ಮೋಹನ ಆಳ್ವ ಅವರು ಹೇಳಿದರು. ಅವರು ಪಿ. ಎನ್ ಆಚಾರ್ಯ ಅಭಿಮಾನಿ ಬಳಗ ಉಡುಪಿಯ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕಲಾಸಿರಿ ಕಲಾ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಅಭಿಮಾನಿ ಬಳಗದ ಅಧ್ಯಕ್ಷ ಅಲೆವೂರು ಯೋಗಿಶ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಾಯ ಮೂಡುಬೆಳ್ಳೆ ಅವರು ಪುಸ್ತಕ ಪರಿಚಯ ಮಾಡಿದರು.ಕರಾವಳಿ ಚಿತ್ರಕಲಾ ಚಾವಡಿಯ ಅಧ್ಯಕ್ಷ ಗಣೇಶ ಸೋಮಯಾಜಿ ಮುಖ್ಯ ಅತಿಥಿಗಳಾಗಿದ್ದರು. ಪ್ರಾಧ್ಯಾಪಕ ಎ.ಪಿ.ಆಚಾರ್ಯ ಶುಭಾಶಂಸನೆಗೈದರು. ಡಾ.ಎಸ್.ಪಿ. ಗುರುರಾಜ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎನ್.ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿದರು. ಕೆ. ಮುರಳಿಧರ ವಂದಿಸಿದರು. ಭಾವಗಾನ ಕಾರ್ಯಕ್ರಮದಲ್ಲಿ ರತ್ನಾವತಿ ಜೆ. ಬೈಕಾಡಿ, ಅಕ್ಷತಾ ಬೈಕಾಡಿ, ಮೈಥಲಿ ಪಡುಬಿದ್ರೆ, ಡಾ.ಪ್ರತಿಮಾ ಜಯಪ್ರಕಾಶ್ ಭಾಗವಹಿಸಿದರು. ಪಿ.ಎನ್ ಆಚಾರ್ಯ ವೇದಿಕೆಯಲ್ಲಿದ್ದರು. ಖ್ಯಾತ ಕಲಾವಿದೆ ರೂಪಾ ವಸುಂಧರಾ ಆಚಾರ್ಯ ಅವರ ಕಲಾಕೃತಿಗಳ ಪುಷ್ಪಾಂಜಲಿ ಪ್ರದರ್ಶನ ನಡೆಯಿತು.
Kshetra Samachara
02/09/2022 10:36 pm