ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಮರದ ಗಣಪತಿ ಪೂಜೆ ಮೂಲಕ ಗಣೇಶೋತ್ಸವದ ವಿಶಿಷ್ಟ ಆಚರಣೆ

ಮುಲ್ಕಿ: ಸುಮಾರು ಅನೇಕ ವರ್ಷಗಳ ಇತಿಹಾಸವಿರುವ ಮುಲ್ಕಿ ಯಕ್ಷಗಾನ ಮೇಳವನ್ನು ಪ್ರಾರಂಭಿಸಿದ ಭಾಗವತ ಕುಟುಂಬದಲ್ಲಿ ಅನೇಕ ಕಲಾವಿದರಿದ್ದು, ಹಣಕಾಸಿನ ಮುಗ್ಗಟ್ಟಿನಿಂದ ಕಷ್ಟದ ಸಮಯದಲ್ಲಿ ಮೇಳವನ್ನು ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಒಪ್ಪಿಸಿದ್ದು ಈ ಸಂದರ್ಭ ದೇವರ ದರ್ಶನ ನುಡಿಯಲ್ಲಿ ಮೇಳದ ನೆನಪಿಗೋಸ್ಕರ ಮೇಳದ ಚೌಕಿಯಲ್ಲಿ ಪೂಜೆ ಮಾಡುವ ಮರದ ಗಣಪತಿಯನ್ನು ಪ್ರಸಾದ ರೂಪದಲ್ಲಿ ಭಾಗವತ ಕುಟುಂಬಕ್ಕೆ ನೀಡಿ ವರುಷಕೊಮ್ಮೆ ಗಣೇಶೋತ್ಸವದ ದಿನದಂದು ಪೂಜೆ ಸಲ್ಲಿಸಬೇಕು ಎಂದು ಹೇಳಲಾಯಿತು.

ಅದರಂತೆ ಮುಲ್ಕಿಯ ಪಂಚಮಹಲ್ ಮಾಡ್ಲೋಕ್ ಶ್ರೀ ಮಹಾಗಣಪತಿ ಮೂಲಸ್ಥಾನದಲ್ಲಿ ಕಳೆದ ಕೆಲವು ವರ್ಷಗಳಿಂದ ಗಣೇಶೋತ್ಸವದ ದಿನದಂದು ಮರದ ಗಣಪತಿಯ ಪೂಜೆ ವಿಶಿಷ್ಟ ರೀತಿಯಲ್ಲಿ ನಡೆಯುತ್ತಿದೆ ಎಂದು ಭಾಗವತ ಕುಟುಂಬದ ಪ್ರಧಾನರಾದ ನರಸಿಂಹ ಭಾಗವತ್ ತಿಳಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

31/08/2022 08:27 pm

Cinque Terre

15.32 K

Cinque Terre

1

ಸಂಬಂಧಿತ ಸುದ್ದಿ