ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಸೀಸದ ಕಡ್ಡಿಯಲ್ಲಿ ಬಲಮುರಿ ಗಣಪ: ಸುರೇಂದ್ರರ ಕೈಚಳಕಕ್ಕೆ ಮೂಗಿನ ಮೇಲೆ ಬೆರಳಿಟ್ಟ ಜನ!

ಕುಂದಾಪುರ: 7ಮಿಲೀ ಮೀಟರ್ ಉದ್ದ ಮತ್ತು 2ಮಿಲೀ ಮೀಟರ್ ದಪ್ಪದ ಅಪ್ಸರ ಕಂಪೆನಿಯ ಪೆನ್ಸಿಲ್(ಲೆಡ್)ನಲ್ಲಿ ಕುಳಿತ ಬಲಮುರಿ ಗಣಪನ ಸೂಕ್ಷ್ಮ ಕಲಾಕೃತಿ!

ಕಾರ್ಕಳದ ಯುವಕ, ಕೆಪಿಟಿಸಿಎಲ್ ಗುತ್ತಿಗೆ ಆದಾರದಲ್ಲಿ ಕೆಲಸ ಮಾಡುವ ಅಪ್ರತಿಮ ಕಲಾವಿದ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುರೇಂದ್ರ ಎಂಬುವರೇ ಈ ಸಾಧನೆ ಮಾಡಿದವರು. ಪಾಕಿಸ್ತಾನದ ಕಲಾವಿದನ ದಾಖಲೆಯಾದ ಪೆನ್ಸಿಲ್ ಲೆಡ್ಜ್‌ನ "50 ಸರಪಳಿ"ಯನ್ನು ಮುರಿದು, ಸುರೇಂದ್ರ ರವರ 58 ಪೆನ್ಸಿಲ್ ಲೆಡ್ ಸರಪಳಿ ಗಿನ್ನಿಸ್ ದಾಖಲೆಯಾಗಿ ವಿಶ್ವದಾಖಲೆಯಲ್ಲಿ ದೇಶದ ಹಿರಿಮೆಯನ್ನು ಹೆಚ್ಚಿಸಿತ್ತು.

ಆ.31ರ ಬುಧವಾರ ಚೌತಿಯ ದಿನದಂದು ಉಡುಪಿಯ ಮಾರುತಿ ವೀಥೀಕಾದಲ್ಲಿ ಶ್ಯಾಮ್ ಕಾಂಪ್ಲೆಕ್ಸ್‌ನ ಮುಂಭಾಗದಲ್ಲಿ ನಡೆಯಲಿರುವ ಗಣೇಶೋತ್ಸವದಲ್ಲಿ ಬೆಳಗ್ಗಿನಿಂದ ಸಂಜೆಯ ತನಕ ಉಚಿತ ವೀಕ್ಷಣೆಗೆ ಇಡಲಾಗುತ್ತದೆ.

Edited By : Nagaraj Tulugeri
PublicNext

PublicNext

29/08/2022 06:38 pm

Cinque Terre

19.56 K

Cinque Terre

0

ಸಂಬಂಧಿತ ಸುದ್ದಿ