ಕುಂದಾಪುರ: ಸಾಧನಾ ಕಲಾ ಸಂಗಮ (ರಿ) ಕುಂದಾಪುರವು ೨೦೦೯ರಿಂದ ನಿರಂತರವಾಗಿ ನಡೆಸಿಕೊಂಡು ಬಂದಿರುವ ಗಜವರ್ಣ-2022 ಗಣೇಶ ಚೌತಿಯ ಸಂದರ್ಭದಲ್ಲಿ ಗಣಪತಿ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ನಾರಾಯಣ ಐತಾಳ್ ತಿಳಿಸಿದ್ದಾರೆ. ಎಲ್.ಕೆ.ಜಿ ಯಿಂದ 10ನೇ ತರಗತಿಯ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.
ಈ ಸ್ಪರ್ಧೆ 3 ವಿಭಾಗಗಳಲ್ಲಿ ನಡೆಯುತ್ತದೆ. ಪ್ರತಿ ವಿಭಾಗದಲ್ಲಿ 5 ಬಹುಮಾನಗಳನ್ನು ನಿಗದಿಪಡಿಸಲಾಗಿದೆ. 6 ವರ್ಷ, 6 ರಿಂದ 10 ವರ್ಷದೊಳಗಿನವರು ಹಾಗೂ 10 ರಿಂದ 15 ವರ್ಷದವರೆಗಿನ ವಿದ್ಯಾರ್ಥಿಗಳು ಸೇರಿದಂತೆ ಮೂರು ವಿಭಾಗಗಳಲ್ಲಿ ಈ ಸ್ಪರ್ಧೆ ನಡೆಯಲಿದೆ.
ಈ ಬಾರಿ ಗಣಪತಿ ಚಿತ್ರ ರಚನೆಯನ್ನು ವಿದ್ಯಾರ್ಥಿಗಳು ಮನೆಯಲ್ಲಿ ರಚಿಸಿ ನಮಗೆ ತಲುಪಿಸಬೇಕು. ಸ್ಪರ್ಧಾಳುಗಳು ಡ್ರಾಯಿಂಗ್ ಹಾಳೆಯಲ್ಲಿ (ಬಿಳಿಯ ಚಾರ್ಟ ಪೇಪರ್) ಗಣಪತಿಯ ಚಿತ್ರವನ್ನು ನಿಮ್ಮ ಮನೆಯಲ್ಲೇ ರಚಿಸಬೇಕು. ಚಿತ್ರದ ಹಿಂಬಾಗದಲ್ಲಿ ಸ್ಪರ್ಧಿಯ ಹೆಸರು, ಜನ್ಮ ದಿನಾಂಕ, ವಾಟ್ಸಾಪ್ ಫೋನ್ ನಂಬರ್ ಹಾಗೂ ಈಮೇಲ್ ಐಡಿ ಬರೆಯಬೇಕು.
ಕಪ್ಪು/ಬಿಳುಪು ಅಥವಾ ಬರೇ ಪೆನ್ಸಿಲ್‌ನಲ್ಲಿ ಚಿತ್ರ ಬಿಡಿಸಿದಲ್ಲಿ ಪರಿಗಣಿಸುವುದಿಲ್ಲ. ಯಾವುದೇ ತರಹದ ಬಣ್ಣಗಳನ್ನು ಬಳಸಿಯೇ ಬಿಡಿಸಬೇಕು. ಎಲ್ಲಾ ವಿಭಾಗಕ್ಕೂ ಪ್ರಥಮ, ದ್ವಿತೀಯ, ತೃತೀಯ ಹಾಗೂ 2 ಸಮಾಧಾನಕರ ಬಹುಮಾನಗಳನ್ನು ನೀಡಲಾಗುತ್ತದೆ. ನಮ್ಮ ತೀರ್ಪುದಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
ಸ್ಪರ್ಧೆಯ ಫಲಿತಾಂಶವನ್ನು ದಿನಪತ್ರಿಕೆಯಲ್ಲಿ ಪ್ರಕಟಿಸಲಾಗುತ್ತದೆ ಹಾಗೂ ವಾಟ್ಸಾಪ್ ನಂಬರ್‌ಗೆ ಕಳುಹಿಸಲಾಗುವುದು. ಸ್ಪರ್ಧಿಗಳು ಮೂಲತಃ ಉಡುಪಿ ಜಿಲ್ಲೆಯವರಾಗಿರಬೇಕು. ಚಿತ್ರಗಳನ್ನು ಆಗಸ್ಟ್ 27ರ ಒಳಗೆ ಸಾಧನ ಕಲಾ ಸಂಗಮ (ರಿ), ಹಳೆಯ ಯೂರೊ ಕಿಡ್ಸ್ ಕಟ್ಟಡ, ಸಟ್ವಾಡಿ ಸುಂದರ ಶೆಟ್ಟಿ ಅಂಗಡಿಯ ಹಿಂಭಾಗ, ಬಿ ಎಚ್ ಎಮ್ ರಸ್ತೆ, ಕುಂದಾಪುರ 576201 ಇಲ್ಲಿಗೆ ತಲುಪಿಸಬೇಕು.
ಹೆಚ್ಚಿನ ಮಾಹಿತಿಗಳಿಗಾಗಿ 8722739038, 8762436950, ಈಮೇಲ್ : sadhanakpr2010@gmail.com ಅಥವಾ WWW.SADANAKALASANGAMA.ORG ಸಂಪರ್ಕಿಸ ಕೋರಿದ್ದಾರೆ.
Kshetra Samachara
20/08/2022 05:18 pm