ಮುಲ್ಕಿ: ಶ್ರೀ ರಾಘವೇಂದ್ರ ಸ್ವಾಮಿಗಳು ಒರ್ವ ಯುಗಪುರುಷನಾಗಿದ್ದು ಧಾರ್ಮಿಕತೆ ಜೊತೆಗೆ ಸಮಾಜದ ಅಭಿವೃದ್ಧಿಯ ಹರಿಕಾರರಾಗಿದ್ದು ಅವರ ಆರಾಧನೆ ಮಾಡುವುದು ಒಂದು ಯಜ್ಞದಂತೆ, ಅದರ ಫಲ ಸಮಾಜಕ್ಕೆ ದೊರೆಯಬೇಕು ಎಂದು ಶ್ರೀ ಕ್ಷೇತ್ರ ಕಟೀಲಿನ ಅರ್ಚಕ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.
ಕಿನ್ನಿಗೋಳಿ ಯುಗಪುರುಷ ವಲಯದ ಶ್ರೀ ಮದ್ಗುರು ರಾಘವೇಂದ್ರ ಸ್ವಾಮಿ ಮಂದಿರದಲ್ಲಿ ಸ್ವಾಮಿಗಳ ಆರಾಧನಾ ಮಹೋತ್ಸವದ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಉಪತಹಶೀಲ್ದಾರ್ ವೈ. ಯೋಗೀಶ್ ರಾವ್ , ನಿವೃತ್ತ ಶಿಕ್ಷಕ ಬಾಲಕೃಷ್ಣ ಉಡುಪ , ಅರ್ಚಕ ರಾಘವೇಂದ್ರ ಭಟ್, ಉದ್ಯಮಿ ಪ್ರಥ್ವಿರಾಜ ಆಚಾರ್ಯ, ಪು.ಗುರುಪ್ರಸಾದ್ ಭಟ್, ವಿಪ್ರ ಸಂಪದದ ಅಧ್ಯಕ್ಷ ಸುಧಾಕರ ರಾವ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
13/08/2022 08:31 pm