ಮೂಡುಬಿದಿರೆ: ಸಾಂಸ್ಕೃತಿಕವಾಗಿ ಪೌರಾಣಿಕ, ಧಾರ್ಮಿಕ ಮಹತ್ವ ಸಾರುವ ತುಳುವರ ಹೆಮ್ಮೆಯ ಕಲೆ ಯಕ್ಷಗಾನ, ಸಹಸ್ರಾರು ಜನರ ಮನದಲ್ಲಿ ಹಾಸುಹೊಕ್ಕಾಗಿರುವ ಈ ಕಲೆಯನ್ನು-ಮನೆಯಲ್ಲಿ ಪ್ರದರ್ಶಿಸಿದರ ವಾಸ್ತುದೋಷ, ನಿವಾರಣೆಯಾಗುತ್ತದೆ ಎನ್ನುವ ನಂಬಿಕೆಯೂ ಇದೆ.
ವಾಸ್ತುದೋಷಕ್ಕೂ ಯಕ್ಷಗಾನಕ್ಕೂ ಏನು ಸಂಬಂಧ? ಎಂಬ ಪ್ರಶ್ನೆಗೆ ಚಿಕ್ಕಮೇಳಗಳ ಪ್ರದರ್ಶನ ಉತ್ತರ ನೀಡುತ್ತವೆ. ವಿದ್ಯುತ್ ದೀಪಾಲಂಕೃತ ರಂಗಸ್ಥಳದಲ್ಲಿ ಪ್ರದರ್ಶನಗೊಳ್ಳುವ ಈ ಯಕ್ಷಗಾನ ಮನೆಯೊಳಗೂ ಪ್ರದರ್ಶನಗೊಳ್ಳುತ್ತದೆ. ಮಳೆಗಾಲದಲ್ಲಿ ಈ ಚಿಕ್ಕಮೇಳಗಳ ಮೂಲಕ ಮನೆಯೊಳಗೆ ಯಕ್ಷಗಾನ ಪ್ರದರ್ಶಿಸುತ್ತಾರೆ. ಭಾಗವತರು, ಚೆಂಡೆ, ಮದ್ದಳೆ, ಹಾರ್ಮೋನಿಯಂ ವಾದಕರು ಹಾಗೂ ಎರಡು ವೇಷಧಾರಿಗಳನ್ನೊಳಗೊಂಡ ಆರು ಮಂದಿಯ ಈ ಮೇಳ ತಂಡ ಸಾಗುವ ದಾರಿ ಇದು. ಚೆಂಡೆ, ಮದ್ದಳೆ, ನಿನಾದ, ಭಾಗವತರ ಹಾಡುಗಾರಿಕೆಯಿಂದ ಮನೆಯೊಳಗಿನ ಪಿಶಾಚಿಗಳು ಓಡಿ ಹೋಗುತ್ತವೆ ಎಂಬ ನಂಬಿಕೆ ತುಳುನಾಡಿನ ಕೆಲ ಮನೆಗಳಲ್ಲಿದೆ. ವಾಸ್ತು ದೋಷವೇನಾದರೂ ಇದ್ದರೆ ಚಿಕ್ಕಮೇಳದಿಂದ ಆಟ ಆಡಿಸಿದರೆ ಪರಿಹಾರವಾಗುತ್ತದಂತೆ. ಮಳೆಗಾಲದಲ್ಲಿ ಚಿಕ್ಕಮೇಳಗಳು ಹೋಗಿ ಮನೆ ನ ಪ್ರದರ್ಶನ ನೀಡುತ್ತದೆ. ಮನೆಯವರೂ ಭಕ್ತಿಭಾವದಿಂದ ವಿನಂತಿಸಿ ತಮ್ಮ ಮನೆಗೆ ಪ್ರದರ್ಶನ ನೀಡುವಂತೆ ಮಾಡುತ್ತಾರೆ.
ಮನೆಯು ದೋಷಮುಕ್ತವಾಗಲಿ ಆಶಯ ಎಲ್ಲರಿಗೂ ಇರುತ್ತದೆ. ಯಕ್ಷಗಾನ ಇಂದಿನ ಪೀಳಿಗೆಯಿಂದ ದೂರವಾಗುತ್ತಿದೆ. ಇತರ ಮಾಧ್ಯಮದ ಜೊತೆಗೆ ಯಕ್ಷಗಾನವನ್ನು ಮನೆಯಿಂದ ಹೋಗಿ ನೋಡುವವರು ಕಡಿಮೆಯಾಗಿದ್ದಾರೆ. ಹೀಗಾಗಿ ಮನೆ ಮನೆಗಳಿಗೆ ಯಕ್ಷಗಾನ ಹೋಗಿರುವುದರಿಂದ ಇಂದಿನ ಪೀಳಿಗೆಗೂ ಯಕ್ಷಗಾನದ ಬಗ್ಗೆ ಅರಿವು ಮೂಡುತ್ತದೆ. ಎನ್ನುವುದೇ ಈ ಚಿಕ್ಕಮೇಳಕ್ಕಿರುವ ಶಕ್ತಿಯಾಗಿದೆ.
ಚಿಕ್ಕಮೇಳದ ಮೂಲಕ ಯಕ್ಷಗಾನ ಕಲಾವಿದರಿಗೆ ತಮ್ಮ ಜೀವನ ನಿರ್ವಹಣೆ ಸಾಧ್ಯ.
ಜಿಟಿಜಿಟಿ ಮಳೆಗೆ ಮನೆಯಲ್ಲಿ ಕುಳಿತುಕೊಳ್ಳುವ ರೈತಾಪಿ ಜನರಿಗೆ ಮನರಂಜನೆಯೂ ಸಿಗುತ್ತದೆ. ಇದರಿಂದಾಗಿ ಒಳ್ಳೆಯದಾಗುತ್ತದೆ. ಪ್ರವೇಶಕ್ಕೆ ಮನಪೂರ್ವಕ ಸ್ವಾಗತವು ಸಿಗುತ್ತದೆ. ಮೂಡುಬಿದಿರೆ-ಕಾರ್ಕಳ ಪ್ರದೇಶದಲ್ಲಿ ಈಗಲೂ ಚಿಕ್ಕಮೇಳಕ್ಕೆ ಆಹ್ವಾನವಿದೆ.
Kshetra Samachara
12/08/2022 04:34 pm