ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು:ತುಳು ಭಾಷೆ ಮತ್ತು ಸಂಸ್ಕೃತಿಗೆ ಅಪೂರ್ವ ಸ್ಥಾನ ಹಾಗೂ ಗೌರವವಿದೆ

ಮಂಗಳೂರು:ತುಳು ಭಾಷೆ ಮತ್ತು ಸಂಸ್ಕೃತಿಗೆ ಅಪೂರ್ವ ಸ್ಥಾನ ಹಾಗೂ ಗೌರವವಿದೆ. ಕರಾವಳಿಯ ತುಳು ಸಂಪ್ರದಾಯದಲ್ಲಿ ಬಹು ಮುಖ್ಯವಾದ ಆಟಿ ಆಚರಣೆಯನ್ನು ಸಮಾಜಕ್ಕೆ ತಿಳಿಸುವ ಕಾರ್ಯ ಸ್ತುತ್ಯರ್ಹ ಎಂದು ತುಳು ಚಲನಚಿತ್ರ ಮತ್ತು ರಂಗ ಕಲಾವಿದರಾದ ದೇವದಾಸ್ ಕಾಪಿಕಾಡ್ ಹೇಳಿದರು. ಮಲ್ಲಿಕಟ್ಟೆಯ ಸುಮಾ ಸದನ ಸಭಾಂಗಣದಲ್ಲಿ ಜನತಾದಳ ದಕ್ಷಿಣ ವಿಧಾನಸಭಾ ಕ್ಷೇತ್ರದ ವತಿಯಿಂದ ಸಮಾಜ ಸೇವಕಿ ಡಾ .ಸುಮತಿ ಹೆಗ್ಡೆಯವರ ನೇತ್ರತ್ವದಲ್ಲಿ ನಡೆದ ಆಟಿಡೊಂಜಿ ದಿನ ಮತ್ತು ಸಾಧಕರಿಗೆ ಗೌರವ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜೆಡಿಎಸ್ ಮಹಿಳಾ ಮಾಜೀ ಘಟಕಾಧ್ಯಕ್ಷೆ ಹಾಗೂ ದಕ್ಷಿಣ ವಿಧಾನಸಭೆ ಕ್ಷೇತ್ರ ಅದ್ಯಕ್ಷೆ ಡಾ .ಸುಮತಿ ಹೆಗ್ಡೆ ಅಧ್ಯಕ್ಷತೆ ವಹಿಸಿದರು.

ಈ ಸಂಧರ್ಭ ಮುಖ್ಯ ಅತಿಥಿಗಳಾಗಿ ದ.ಕ.ಜಿಲ್ಲಾ ಜನತಾ ದಳ ಅಧ್ಯಕ್ಷ ಜಾಕೆ ಮಾಧವಗೌಡ. ಕರ್ನಾಟಕ ರಾಜ್ಯ ಜನತಾದಳ ಕಾರ್ಯದರ್ಶಿ ಇಕ್ಬಾಲ್ ಅಹಮದ್ ,ದ.ಕ ಜಿಲ್ಲಾ ಜೆಡಿಎಸ್ ಸೇವಾದಳ ಅಧ್ಯಕ್ಷ ನಝೀರ್ ಸಾಮಣಿಗೆ ,ಲತೀಫ್ ವಲಚ್ಚಿಲ್, ಸದಾಶಿವ ಹೆಗ್ಡೆ, ಇಕ್ಬಾಲ್ ,ಲತೀಫ್ ಶಿವಭಾಗ್, ಪ್ರಿಯ ಸಾಲಿಯಾನ್ ,ಶಾಲಿನಿ ರೈ , ಹಮೀದ್ ಬೆಂಗೆರೆ ,ಉಷಾ ಟೀಚರ್ ,ಶಾರದ ಶೆಟ್ಟಿ, ಚೆನ್ನಪ್ಪ ಬಂಗೇರ ಉಪಸ್ಥಿತರಿದ್ದರು.

ಈ ಸಂದರ್ಭ ವಿವಿಧ ಕ್ಷೇತ್ರ ಸಾಧಕರಾದ ದೇವದಾಸ್ ಕಾಪಿಕಾಡ್ , ವೀಣಾ ಶೆಟ್ಟಿ, ಸಾರಾ ಇಸ್ಮಾಯಿಲ್ , ಶೋಭಾ ರಾಣಿ ಬಲ್ಲಾಲ್ ಭಾಗ್ ರವರನ್ನು ಜನತಾದಳ ದಕ್ಷಿಣ ವಿಧಾನಸಭಾ ಕ್ಷೇತ್ರದ ವತಿಯಿಂದ ಗೌರವಿಸಲಾಯಿತು.ಚಂದ್ರಶೇಖರ್ ಮಂಗಳಾದೇವಿ ಸ್ವಾಗತಿಸಿದರು. ಅಲ್ತಾಫ್ ತುಂಬೆ ವಂದಿಸಿದರು.ತುಳುನಾಡಿನ ಘತ ವೈಭವವನ್ನು ನೆನಪಿಸುವ ಹಲವು ಕಾರ್ಯಕ್ರಮಗಳು, ಮನರಂಜನೆಗಳು ಹಾಗೂ ಸಹೋದರತೆ, ಸಮಾನತೆ ಸಾರುವ ವಿನೋಧ ಕಾರ್ಯಕ್ರಮಗಳು ಆಟಿಡೊಂಜಿ ದಿನ ದ ವಿಶೇಷತೆಯಾಗಿತ್ತು.

Edited By : PublicNext Desk
Kshetra Samachara

Kshetra Samachara

10/08/2022 08:06 pm

Cinque Terre

1.36 K

Cinque Terre

0

ಸಂಬಂಧಿತ ಸುದ್ದಿ