ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಹೊಸ ಕಲಿಕಾನುಭವ; "ವಾಣಿಜ್ಯ ಲೋಕದ ಕಲರವ"

ಕುಂದಾಪುರ: ಕುಂದಾಪುರ ಬಿ.ಬಿ. ಹೆಗ್ಡೆ ಕಾಲೇಜಿನ ವಾಣಿಜ್ಯ ವಿಭಾಗ ವಿದ್ಯಾರ್ಥಿಗಳಿಗೆ ಆ ದಿನ ಹೊಸದೊಂದು ಕಲಿಕಾನುಭವ! ಹೌದು... ಉಪನ್ಯಾಸಕರು, ವಿದ್ಯಾರ್ಥಿಗಳ ಭವಿಷ್ಯದ ಜೀವನಕ್ಕೆ ಪೂರಕವಾಗುವಂತಹ ಮುಖ್ಯವಾಗಿ ಹಣಕಾಸಿಗೆ ಸಂಬಂಧಿಸಿದ "ಬಿಸಿನೆಸ್"‌ ಕ್ಲಾಸನ್ನೇ ಮನ ಮುಟ್ಟುವಂತೆ ಅನಾವರಣಗೊಳಿಸಿದ್ದರು.

ಮುಂದಿನ ವೃತ್ತಿ ಬದುಕಿನಲ್ಲಿ ಎದುರಾಗುವ ನಾನಾ ಸವಾಲುಗಳನ್ನು ಹೇಗೆ ನಿರ್ಭಯವಾಗಿ ನಿಭಾಯಿಸಬೇಕೆಂದು ಪರಿಣತ ಪ್ರಾಧ್ಯಾಪಕ ವೃಂದ ತಾಳ್ಮೆ-ಹುಮ್ಮಸ್ಸಿನಿಂದ ಉತ್ಸಾಹಿ ವಿದ್ಯಾರ್ಥಿಗಳಿಗೆ ಅರ್ಥೈಸಿತು.

ಬಳಿಕ ವಿದ್ಯಾರ್ಥಿಗಳ 7 ತಂಡಗಳನ್ನಾಗಿ ವಿಭಜಿಸಿ, ಉಪನ್ಯಾಸಕರ ಮಾರ್ಗದರ್ಶನ- ಸಲಹೆಯಂತೆ ಒಂದೊಂದು ಕೊಠಡಿಯಲ್ಲಿ ವಿವಿಧ ಮಾದರಿಯ ವ್ಯಾಪಾರ ವಹಿವಾಟಿಗೆ ವಿದ್ಯಾರ್ಥಿಗಳು ಮುಂದಡಿ ಇಟ್ಟರು.

ಚಾರ್ಟ್ಸ್, ವೆಜ್ ಆಂಡ್ ನಾನ್ ವೆಜ್ ಆಹಾರ ವೈವಿಧ್ಯ, ಸಸ್ಯಮೂಲ ಔಷಧಿ ಸಹಿತ ಇತರ ನಿತ್ಯೋಪಯೋಗಿ ವಸ್ತು ಪ್ರದರ್ಶನ- ಮಾರಾಟ, ಕಚೇರಿ ಕಾರ್ಯನಿರ್ವಹಣೆ... ಹೀಗೆ ನಾನಾ ವ್ಯಾಪಾರ ಚಟುವಟಿಕೆಗಳ ಮೂಲಕ ಬದುಕಿನ ದಾರಿಗೆ ಆಕಾಶದಷ್ಟು ಅವಕಾಶಗಳಿವೆ ಎಂಬುದನ್ನು ವಿದ್ಯಾರ್ಥಿಗಳು ಕಂಡುಕೊಂಡರು.

ಮೂರು ದಿನಗಳ ಈ ಉದ್ಯೋಗ- ವ್ಯಾಪಾರ ಮೇಳದಲ್ಲಿ ಅತಿ ಹೆಚ್ಚು ವ್ಯಾಪಾರ-ವಹಿವಾಟು ನಡೆಸುವುದರ ಜತೆಗೆ ಅವರ ಆಯ- ವ್ಯಯ ಪಟ್ಟಿಯನ್ನೂ ಅವಲೋಕಿಸಿ, ಯಶಸ್ವಿಯಾದ ವಿದ್ಯಾರ್ಥಿಗಳಿಗೆ ಕಾಲೇಜಿನ ವತಿಯಿಂದ ಬಹುಮಾನ ನೀಡಿ, ಪ್ರೋತ್ಸಾಹಿಸಲಾಗುವುದು ಎಂದು ಪ್ರಾಧ್ಯಾಪಕರು ತಿಳಿಸಿದ್ದಾರೆ.

ವರದಿ: ದಾಮೋದರ ಮೊಗವೀರ, ನಾಯಕವಾಡಿ

Edited By : Nagesh Gaonkar
Kshetra Samachara

Kshetra Samachara

04/08/2022 10:33 pm

Cinque Terre

10.03 K

Cinque Terre

0

ಸಂಬಂಧಿತ ಸುದ್ದಿ