ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮಲೇಷ್ಯಾದ ನೃತ್ಯಾಂಜಲಿ ಫೆಸ್ಟಿವಲ್ ನಲ್ಲಿ ಉಡುಪಿ ವಿದ್ಯಾರ್ಥಿನಿಯರ ನೃತ್ಯ ಪ್ರದರ್ಶನ

ಉಡುಪಿ: ಕಳೆದ ಲಾಕ್ ಡೌನ್ ಸಮಯದಲ್ಲಿ ನಡೆದ ಸಂಗಮ್ ಗ್ಲೋಬಲ್ ಅಕಾಡೆಮಿ ಚೆನ್ನೈ ನಡೆಸಿದ ಭರತನಾಟ್ಯ ಸ್ಪರ್ಧೆಯಲ್ಲಿ 830 ಸ್ಪರ್ಧಾಳುಗಳ ಪೈಕಿ ಉಡುಪಿಯ ಪ್ರತಿಷ್ಠಿತ ಸಂಸ್ಥೆ ಸೃಷ್ಟಿ ನೃತ್ಯ ಕುಟೀರದ ವಿದ್ಯಾರ್ಥಿನಿಯರಾದ ಕುಮಾರಿ ಧನ್ಯಶ್ರೀ ಭಟ್ ಸೀನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗು ಜೂನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದಿದ್ದರು. ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದ ನೃತ್ಯಾಂಜಲಿ ಫೆಸ್ಟಿವಲ್ ನಲ್ಲಿ ಇವರ ಆಚಾರ್ಯರಾದ ಮಂಜರಿ ಚಂದ್ರ ಪುಷ್ಪರಾಜ್ ಇವರೊಂದಿಗೆ ತೆರಳಿ ಸಂಪೂರ್ಣ ಪ್ರಯೋಜಕತ್ವದೊಂದಿಗೆ ಮೂವರ ಪ್ರಯಾಣ ಹಾಗೂ ಅಲ್ಲಿ ನೃತ್ಯ ಪ್ರದರ್ಶನ ನೀಡುವ ಅವಕಾಶ ಪಡೆದುಕೊಂಡಿದ್ದಾರೆ.

ಈ ನಿಟ್ಟಿನಲ್ಲಿ ಇದೇ ಬರುವ ಜೂನ್ 8 ರಂದು ಮಲೇಷ್ಯಾದ ಕೌಲಾಲಂಪುರದ ಟೆಂಪಲ್ ಆಫ್ ಫೈನ್ ಆರ್ಟ್ ನಲ್ಲಿ ನಡೆಯುವ

6 ನೇ ಅಂತಾರಾಷ್ಟ್ರೀಯ ನೃತ್ಯಾಂಜಲಿ ಫೆಸ್ಟಿವಲ್ 2022 ನಲ್ಲಿ ತಮ್ಮ ನೃತ್ಯ ಪ್ರದರ್ಶನ ನೀಡಲಿದ್ದಾರೆ. ಇವರೊಂದಿಗೆ ಅದೇ ಸ್ಪರ್ಧೆಯಲ್ಲಿ ಭಾಗವಸಿ ಸಮಾಧಾನಕರ ಬಹುಮಾನ ಪಡೆದ ಸಂಸ್ಥೆಯ ಮತ್ತೋರ್ವ ವಿದ್ಯಾರ್ಥಿನಿ ಕುಮಾರಿ ಪಿ ಪನ್ನಗಾ ರಾವ್ ಕೂಡ ಸೇರಿಕೊಳ್ಳಲಿದ್ದಾರೆ.

ಧನ್ಯಶ್ರೀ ಭಟ್ ದಿ:ಮಾಧವ್ ಭಟ್ ಹಾಗು ವಿದ್ಯಾ ಇವರ ಪುತ್ರಿ ಪ್ರಸ್ತುತ ಎಂ ಜಿ ಎಂ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ ಎಸ್ ಸಿ ವ್ಯಾಸಂಗ ಮಾಡುತ್ತಿದ್ದು ಈ ವರ್ಷ ಕರ್ನಾಟಕ ಶಿಕ್ಷಣ ಮಂಡಳಿ ನಡೆಸಿದ ಭರತನಾಟ್ಯ ಸೀನಿಯರ್ ಪರೀಕ್ಷೆಯಲ್ಲಿ 95% ಪಡೆದುಕೊಂಡಿದ್ದಾರೆ.

ಕುಮಾರಿ ಜಂಕಿ ಡಿ ವಿ ವಿಪಿನ್ ಕುಮಾರ್ ಹಾಗು ಧನ್ಯ ಇವರ ಪುತ್ರಿ ಬ್ರಹ್ಮಾವರದ ಲಿಟಲ್ ರಾಕ್ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಈ ವರ್ಷ ನಡೆದ ಭರತನಾಟ್ಯ ಸೀನಿಯರ್ ಪರೀಕ್ಷೆಯಲ್ಲಿ 90% ಪಡೆದುಕೊಂಡಿದ್ದಾರೆ. ಪಿ ಜಿ ಪನ್ನಗಾ ರಾವ್ ಇವರು ಗಣೇಶ್ ರಾವ್ ಹಾಗು ಸುಮನ ಜಿ ರಾವ್ ಇವರ ಪುತ್ರಿ ಪಿ ಪಿ ಸಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ ಕಾಂ ವ್ಯಾಸಂಗ ಮಾಡುತ್ತಿದ್ದು ಭರತನಾಟ್ಯ ವಿದ್ವತ್ ಪೂರ್ವ ಪರೀಕ್ಷೆಯಲ್ಲಿ 84% ಪಡೆದು ಜಿಲ್ಲೆಯಲ್ಲೇ ಉತ್ತಮ ಸ್ಥಾನವನ್ನು ಪಡೆದಿದ್ದಾರೆ ಎಂದು ಸುದ್ಧಿಗೋಷ್ಠಿಯಲ್ಲಿ ಮಂಜರಿ ಚಂದ್ರ ಮಾಹಿತಿ ನೀಡಿದರು.

Edited By : Shivu K
Kshetra Samachara

Kshetra Samachara

04/06/2022 07:33 pm

Cinque Terre

17.02 K

Cinque Terre

0

ಸಂಬಂಧಿತ ಸುದ್ದಿ