ಮುಲ್ಕಿ: ಹೊಸ ಅಂಗಣ ತಿಂಗಳ ಬೆಳಕು ಕಾರ್ಯಕ್ರಮ ಮುಲ್ಕಿಯ ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ನಡೆಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಮಾಜಿ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ವಹಿಸಿ ಮಾತನಾಡಿ ವಿದ್ಯೆಯ ಮೂಲಕ ಮುಲ್ಕಿಗೆ ಕೀರ್ತಿ ತಂದ ವಿದ್ಯಾರ್ಥಿನಿಯರ ಸಾಧನೆ ಅಭಿನಂದನೀಯವಾಗಿದ್ದು ಸಾಧಕರ ಸಾಧನೆ ನಿರಂತರವಾಗಲಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ವಕೀಲ ರವೀಶ್ ಕಾಮತ್ ,ನಿವೃತ್ತ ಉಪನ್ಯಾಸಕ ವೈಎನ್ ಸಾಲ್ಯಾನ್, ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ರಮೇಶ್ ಅಮೀನ್, ವಾಮನ ನಡಿಕುದ್ರು, ವಾಸು ಪೂಜಾರಿ ಚಿತ್ರಾಪು, ಜಾನ್ ಕ್ವಾಡ್ರಸ್, ಮುಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ಶಿವರಾಮ ಜಿ.ಅಮೀನ್, ಹೊಸ ಅಂಗಣ ಮಾಸ ಪತ್ರಿಕೆಯ ಸಂಪಾದಕ ಡಾ. ಹರಿಶ್ಚಂದ್ರ ಪಿ ಸಾಲ್ಯಾನ್, ಅಚ್ಯುತ ಮಾಸ್ತರ್, ಜಯಪಾಲ ಶೆಟ್ಟಿ ಐಕಳ, ವಿಜಯಕುಮಾರ್ ಕುಬೆವೂರು, ವಿದ್ಯಾರ್ಥಿಗಳ ಪೋಷಕರಾದ ವಲ್ಲಭ್ ಕಾಮತ್ ,ನಂದಿತಾ ಕಾಮತ್, ವೇದಾನಂದ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಾಧಕರ ನೆಲೆಯಲ್ಲಿ ಸಮಾಜ ಸೇವಕ ಪಡುಬಿದ್ರೆ ಕಲ್ಲಟ್ಟೆ ಜಾರಂದಾಯ ದೈವಸ್ಥಾನದ ಗುತ್ತಿನಾರ್ ವಿಶುಕುಮಾರ್ ಶೆಟ್ಟಿ ರವರನ್ನು ಸನ್ಮಾನಿಸಲಾಯಿತು.ಹಾಗೂ ಎಸೆಸೆಲ್ಸಿ ಟಾಪರ್ ಪ್ರತಿಭಾವಂತ ವಿದ್ಯಾರ್ಥಿಗಳಾದ ವಿ.ಅಕ್ಷತಾ ಎಸ್ ಕಾಮತ್ ಹಾಗೂ ವೀಕ್ಷಾ ವಿ. ಶೆಟ್ಟಿ ರವರನ್ನು ಗೌರವಿಸಲಾಯಿತು.
ವೈ.ಎನ್.ಸಾಲ್ಯಾನ್ ನಿರೂಪಿಸಿದರು.
Kshetra Samachara
28/05/2022 11:07 am