ಮಂಗಳೂರು: ನಗರದ ಬಂಗ್ರ ಕೂಳೂರಿನಲ್ಲಿರುವ ಕರಾವಳಿ ಗ್ರೂಪ್ ಆಫ್ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿಗಳ ಫ್ಯಾಷನ್ ಶೋಗೆ ನೆರೆದವರು ಫಿದಾ ಆಗಿದ್ದಾರೆ. ವಿದ್ಯಾರ್ಥಿ - ವಿದ್ಯಾರ್ಥಿನಿಯರ ಬೆಕ್ಕಿನ ನಡಿಗೆಯು ಪ್ರೇಕ್ಷಕರ ಗಮನ ಸೆಳೆಯಿತು.
ಕರಾವಳಿ ಗ್ರೂಪ್ ಆಫ್ ಕಾಲೇಜಿನ ಅಧ್ಯಕ್ಷ ಗಣೇಶ್ ರಾವ್ ತಮ್ಮ ಹುಟ್ಟುಹಬ್ಬವನ್ನು ಕಾಲೇಜು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಕೇಕ್ ಕಟ್ ಮಾಡುವ ಮೂಲಕ ಆಚರಿಸಿದರು. ಈ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಪ್ರಸ್ತುತ ಪಡಿಸಿದ ಫ್ಯಾಷನ್ ಶೋ ಎಲ್ಲರನ್ನೂ ರಂಜಿಸಿತು.
ಕರಾವಳಿ ಗ್ರೂಪ್ ಆಫ್ ಕಾಲೇಜಿನ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಈ ಫ್ಯಾಷನ್ ಶೋದಲ್ಲಿ ಭಾಗವಹಿಸಿ ಕ್ಯಾಟ್ ವಾಕ್ ನಲ್ಲಿ ತಾವು ಪ್ರೋಫೆಷನಲ್ ಮಾಡೆಲ್ ಗಳಿಗೂ ತಾವೇನೂ ಕಡಿಮೆಯಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ವಿವಿಧ ಥೀಂಗಳ ಮೂಲಕ ಒಟ್ಟು ಏಳು ವಿಭಾಗಗಳಲ್ಲಿ ಈ ಫ್ಯಾಷನ್ ಶೋ ನಡೆಯಿತು. ಬಹಳಷ್ಟು ಸಾಂಪ್ರದಾಯಿಕ ಉಡುಗೆಗಳೇ ಫ್ಯಾಷನ್ ಶೋನಲ್ಲಿ ಕಂಡು ಬಂದಿದ್ದು, ದೇಶದ ವಿವಿಧ ರಾಜ್ಯಗಳ ವೇಷಭೂಷಣಗಳನ್ನು ವಿದ್ಯಾರ್ಥಿಗಳು ಇಲ್ಲಿ ಪ್ರಸ್ತುತಪಡಿಸಿದರು. ಇದೇ ವೇಳೆ ವಿದ್ಯಾರ್ಥಿಗಳ ತಂಡ ನಡೆಸಿಕೊಟ್ಟ ವಿವಿಧ ಪ್ರಕಾರಗಳ ಜಾನಪದ ಕುಣಿತಕ್ಕೆ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
Kshetra Samachara
26/02/2022 05:02 pm