ಮುಲ್ಕಿ: ಮುಲ್ಕಿ ಸಮೀಪದ ಶಿಮಂತೂರು ಮಜಲಗುತ್ರುವಿನಲ್ಲಿ ಧರ್ಮದೈವ ಶ್ರೀ ಕಾಂತೇರಿ ಧೂಮಾವತಿ ಬಂಟ ದೈವಗಳ ನೇಮೋತ್ಸವ ವಿಜ್ರಂಭಣೆಯಿಂದ ನಡೆಯಿತು.
ನೇಮೋತ್ಸವದ ಅಂಗವಾಗಿ ಸಂಜೆ 5.30ಕ್ಕೆ ಭಂಡಾರ ಇಳಿಯುವ ಮೂಲಕ ನೇಮೋತ್ಸವಕ್ಕೆ ಚಾಲನೆ ನೀಡಲಾಯಿತು. ರಾತ್ರಿ 8ಕ್ಕೆ
ಅನ್ನಸಂತರ್ಪಣೆ ಬಳಿಕ ದೈವಗಳಿಗೆ ಗಗ್ಗರ ಸೇವೆ ಮತ್ತು ನೇಮೋತ್ಸವ ವಿಜೃಂಭಣೆಯಿಂದ ನಡೆದು ವರ್ತೆ ಪಂಜುರ್ಲಿ ನೇಮೋತ್ಸವ ನಡೆದು ಪ್ರಸಾದ ವಿತರಿಸಲಾಯಿತು.
ಈ ಸಂದರ್ಭ ಬಾಬಾ ರಂಜನ್ ಶೆಟ್ಟಿ ಮಜಲಗುತ್ತು, ರಾಮದಾಸ್ ಶೆಟ್ಟಿ ಬಾಳಿಕೆ ಮನೆ, ಗಂಗಾಧರ ಶೆಟ್ಟಿ ಬರ್ಕೆ ತೋಟ, ಉತ್ತಮ್ ಮೈಲೊಟ್ಟು, ಶಂಕರ್ ಮಾಸ್ಟರ್, ಕಿಶೋರ್ ಶೆಟ್ಟಿ ದೆಪ್ಪುಣಿ ಗುತ್ತು ಮತ್ತಿತರರು ಉಪಸ್ಥಿತರಿದ್ದರು.
Kshetra Samachara
26/02/2022 01:54 pm