ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿಡ್ಡೋಡಿ: ಸ್ವಾಮಿ ವಿವೇಕಾನಂದರು ಭಾರತೀಯರನ್ನು ಸಂಘಟಿಸಲು ಶ್ರಮಿಸಿದ ಮಹಾನ್ ನಾಯಕ

ನಿಡ್ಡೋಡಿ: ಕಿನ್ನಿಗೋಳಿ ಸಮೀಪದ ನಿಡ್ಡೋಡಿ ಜ್ಞಾನರತ್ನ ಎಜುಕೇಷನ್ ಹಾಗೂ ಚಾರಿಟೇಬಲ್ ಟ್ರಸ್ಟ್ ನಿಡ್ಡೋಡಿ ವತಿಯಿಂದ ಶ್ರೀ ದುರ್ಗಾದೇವಿ ಸಮೂಹ ವಿದ್ಯಾಸಂಸ್ಥೆಯಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನದ ಪ್ರಯುಕ್ತ ರಾಷ್ಟ್ರೀಯ ಯುವದಿನಾಚರಣೆಯನ್ನು ಕೋವಿಡ್ ಮಾರ್ಗಸೂಚಿಯನ್ನು ಪಾಲಿಸುವ ಮುಖಾಂತರ ದೀಪಪ್ರಜ್ವಲಿಸಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಆಚರಿಸಲಾಯಿತು.

ಸಮಾರಂಭದಲ್ಲಿ ವಿದ್ಯಾಭಾರತೀಯ ಪ್ರಾಂತ ಸಂಘಟನಾ ಕಾರ್ಯದರ್ಶಿ ಉಮೇಶ್ ಉಪನ್ಯಾಸ ಮೂಲಕ ಮಕ್ಕಳಿಗೆ ಸ್ವಾಮಿ ವಿವೇಕಾನಂದರ ಜೀವನ ಹಾಗೂ ವಿವೇಕಾನಂದರು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ರ ದಾಸ್ಯವನ್ನು ಅಂತ್ಯಗೊಳಿಸಲು

ಭಾರತೀಯರನ್ನು ಸಂಘಟಿಸಲು ಶ್ರಮಿಸಿ ಅನೇಕ ಸ್ವಾತಂತ್ರ್ಯ ಹೋರಾಟಗಾರರ ಸೃಷ್ಟಿಗೆ ಕಾರಣೀಭೂತರಾಗಿದ್ದಾರೆ ಎಂದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಭಾಸ್ಕರ ದೇವಸ್ಯ ವಹಿಸಿದ್ದರು.

ಸಂಸ್ಥೆಯ ಆಡಳಿತಾಧಿಕಾರಿ ಕೆ. ರಾಘವೇಂದ್ರ ಭಟ್, ಪ್ರಾಂಶುಪಾಲ ಅನುರಾಧ ಸಾಲ್ಯಾನ್ ಹಾಗೂ ಶಾಲಾ ಮುಖ್ಯ ಶಿಕ್ಷಕಿ ಯಶ್ವಿತಾ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

12/01/2022 09:12 pm

Cinque Terre

2.59 K

Cinque Terre

0

ಸಂಬಂಧಿತ ಸುದ್ದಿ