ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ವಕೀಲರ ಸಂಘದಿಂದ ಭಾವೀ ಪರ್ಯಾಯ ಶ್ರೀಗಳಿಗೆ ಸನ್ಮಾನ, ಗೌರವಾರ್ಪಣೆ

ಉಡುಪಿ: ಪರ್ಯಾಯ ಪೀಠಾರೋಹಣ ಮಾಡಲಿರುವ ಕೃಷ್ಣಾಪುರ ಮಠದ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರಿಗೆ ಇಂದು ವಕೀಲರ ಸಂಘದ ವತಿಯಿಂದ ಸನ್ಮಾನಿಸಿ ಗೌರವ ಅರ್ಪಿಸಲಾಯಿತು.ಬೆಳಿಗ್ಗೆ ವಕೀಲರ ಸಂಘದ ಕಚೇರಿಯ ಹಾಲ್ ಗೆ ಆಗಮಿಸಿದ ಶ್ರೀಗಳನ್ನು ವಾದ್ಯ ಘೋಷಗಳೊಂದಿಗೆ ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಲಾಯಿತು.ಬಳಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀಗಳನ್ನು ಸನ್ಮಾನಿಸಿ ಪಾದಕಾಣಿಕೆ ಸಲ್ಲಿಸಲಾಯಿತು.

ಸದಸ್ಯರನ್ನುದ್ದೇಶಿಸಿ ಅನುಗ್ರಹ ಸಂದೇಶ ನೀಡಿದ ಶ್ರೀಗಳು ,ದೇವಸ್ಥಾನಗಳು ಮತ್ತು ನ್ಯಾಯಾಲಯಕ್ಕೆ ಸಾಮ್ಯತೆಗಳಿವೆ.ಹಿಂದೆ ದೇವಸ್ಥಾನಗಳೇ ನ್ಯಾಯ ನೀಡುತ್ತಿದ್ದವು.ದೇವರ ಸಮಕ್ಷಮ ನ್ಯಾಯ ನೀಡುವ ವ್ಯವಸ್ಥೆ ಇತ್ತು.ಈಗ ಅದೇ ಕೆಲಸವನ್ನು ನ್ಯಾಯಾಲಯಗಳು ಮಾಡುತ್ತಿವೆ ಎಂದು ಹೇಳಿದರು.ವಕೀಲರು ಗೌರವ ನೀಡಿ ಕರೆದು ಸನ್ಮಾನಿಸಿದ್ದಕ್ಕೆ ಶ್ರೀಗಳು ಕೃತಜ್ಞತೆ ಸಲ್ಲಿಸಿ ಬಳಿಕ ವಕೀಲರುಗಳಿಗೆ ಅನುಗ್ರಹ ಮಂತ್ರಾಕ್ಷತೆ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ಬಿ.ನಾಗರಾಜ್ ಸ್ವಾಗತಿಸಿದರು.ಕಾರ್ಯದರ್ಶಿ ರೊನಾಲ್ಡ್ ಪ್ರವೀಣ್ ಕುಮಾರ್ ,ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸುಬ್ರಹ್ಮಣ್ಯ ಜೆ.ಎನ್,ಫೋಕ್ಸೋ ನ್ಯಾಯಾಧೀಶೆ ಶ್ರೀಮತಿ ಕಲ್ಪನಾ ,ಹಿರಿಯ ನ್ಯಾಯವಾದಿ ಎನ್ .ಕೆ .ಆಚಾರ್ ,ಎಲ್ಲ ಹಿರಿಯ ಕಿರಿಯ ನ್ಯಾಯಾಧೀಶರುಗಳು ,ಅಭಿಯೋಜಕರು ,ವಕೀಲರ ಸಂಘದ ಪದಾಧಿಕಾರಿಗಳು ,ಸದಸ್ಯರು ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

11/01/2022 12:29 pm

Cinque Terre

24.96 K

Cinque Terre

1

ಸಂಬಂಧಿತ ಸುದ್ದಿ