ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಜ. 12 ರಂದು ಉಡುಪಿಯಲ್ಲಿ ಸಾವರ್ಕರ್ ಸಾಹಿತ್ಯಗಳ ಕುರಿತು ವಿಚಾರಗೋಷ್ಠಿ

ಉಡುಪಿ: ಜ. 12 ರಂದು ಸ್ವಾಮಿ ವಿವೇಕಾನಂದರ ಜನ್ಮ ಜಯಂತಿಯನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ. ಆ ಪ್ರಯುಕ್ತ ಉಡುಪಿಯಲ್ಲಿ ಕೂರ್ಮಾ ಸಂಸ್ಥೆಯು ಸ್ವಾತಂತ್ರ್ಯ ವೀರ ಸಾವರ್ಕರ್ ಅವರ ಸಾಹಿತ್ಯಗಳ ಕುರಿತಾಗಿ ವಿಚಾರಗೋಷ್ಠಿ ಆಯೋಜಿಸಿದೆ. ಕಾರ್ಯಕ್ರಮವು

ಬುಧವಾರ 3 ಗಂಟೆಗೆ ಉಡುಪಿಯ ಪುರಭವನದಲ್ಲಿ ನಡೆಯಲಿದೆ ಎಂದು ಕೂರ್ಮಾ ಬಳಗದ ಸಂಚಾಲಕ ಶ್ರೀಕಾಂತ್ ಶೆಟ್ಡಿ ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವೀರ ಸಾವರ್ಕರ್ ಅವರ ಮೊಮ್ಮಗ, ಮೃತ್ಯುಂಜಯ ಪ್ರಕಾಶನದ ಮುಖ್ಯಸ್ಥರಾಗಿರುವ ಸಾತ್ಯಕಿ ಸಾವರ್ಕರ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಮತ್ತು ಖ್ಯಾತ ಸಾಹಿತ್ಯ ವಿಮರ್ಶಕರಾಗಿರುವ ಸಂದೀಪ್ ಬಾಲಕೃಷ್ಣನ್ ಮೊದಲಾದವರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಸಾವರ್ಕರ್ ಅವರ ಕೃತಿಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ. ಜೊತೆಗೆ ಸಾವರ್ಕರ್ ಸಾಹಿತ್ಯಕ್ಕೆ ಸಂಬಂಧಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಪ್ರಕಾಶ್ ಮಲ್ಪೆ , ಸೂರಜ್ ಕಿದಿಯೂರು ,ಸುಜಿತ್ ಶೆಟ್ಟಿ ಶಶಿಕಾಂತ್ ಶೆಟ್ಟಿ ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

10/01/2022 04:28 pm

Cinque Terre

6.32 K

Cinque Terre

0

ಸಂಬಂಧಿತ ಸುದ್ದಿ