ಪುತ್ತೂರು: ಸ್ವಾತಂತ್ರ್ಯ ಹೋರಾಟಗಾರ, ದೇಶಭಕ್ತ ಎನ್.ಎಸ್.ಕಿಲ್ಲೆ ಮಹಾದ್ವಾರ ಲೋಕಾರ್ಪಣೆ ಕಾರ್ಯಕ್ರಮ ಪುತ್ತೂರಿನಲ್ಲಿ ಇಂದು ನಡೆಯಿತು. ಪುತ್ತೂರು ನಗರ ಮಧ್ಯೆ ಇರುವ ಕಿಲ್ಲೆ ಮೈದಾನಕ್ಕೆ ನಿರ್ಮಿಸಲಾದ ಈ ಮಹಾದ್ವಾರವನ್ನು ಸಚಿವ ಎಸ್.ಅಂಗಾರ ಉದ್ಘಾಟಿಸಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಗಾಂಧೀಜಿ ಅವರು ಪುತ್ತೂರಿಗೆ ಬಂದ ಸಂದರ್ಭ ಗಾಂಧಿ ಜೊತೆ ಗುರುತಿಸಿಕೊಂಡಿದ್ದ ಎನ್.ಎಸ್.ಕಿಲ್ಲೆಯವರು, ಗಾಂಧೀಜಿಯವರ ಭಾಷಣವನ್ನು ಭಾಷಾಂತರಿಸಿ ಮೆಚ್ಚುಗೆಗೆ ಪಾತ್ರರಾಗಿದ್ದರು. ಕಿಲ್ಲೆ ಪ್ರತಿಷ್ಠಾನದ ಮೂಲಕ ಈ ದ್ವಾರ ನಿರ್ಮಿಸಲಾಗಿದೆ.
Kshetra Samachara
01/01/2022 03:14 pm