ಕಾರ್ಕಳ: ಬಜಗೋಳಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಗಣಿತ ದಿನವನ್ನು ಶ್ರೀನಿವಾಸ ರಾಮಾನುಜನ್ ಅವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಮಾಡುವ ಮೂಲಕ ಆಚರಿಸಲಾಯಿತು.
ಗಣಿತ ಉಪನ್ಯಾಸಕರಾದ ಪ್ರವೀಣ್ ಕುಮಾರ್ ಶೆಟ್ಟಿ ಇವರು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ "ಅನಂತ ಅರಿತ ಮನುಷ್ಯ" ಎಂದೇ ಪ್ರಸಿದ್ಧರಾದ ಶ್ರೀನಿವಾಸ ರಾಮಾನುಜನ್ ಜನಿಸಿದ ಡಿಸೆಂಬರ್ 22ನ್ನು ರಾಷ್ಟ್ರೀಯ ಗಣಿತ ದಿನವನ್ನಾಗಿ ಆಚರಿಸುವುದರ ಹಿನ್ನೆಲೆ ಹಾಗು ಅದರ ಔಚಿತ್ಯಗಳ ಕುರಿತು ಮಾಹಿತಿ ನೀಡಿದರು.
ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಪ್ರತೀಕ್ಷಾ ಇವರು ಶ್ರೀನಿವಾಸ ರಾಮಾನುಜನ್ ರ ಜೀವನ ಚರಿತ್ರೆ ಹಾಗೂ ಅವರ ಸಾಧನೆಗಳ ಪರಿಚಯ ಮಾಡಿದರು.
ವಿಜ್ಞಾನ ವಿಭಾಗದ ಪೂರ್ವ ವಿದ್ಯಾರ್ಥಿಗಳಾದ ಅರ್ಪಿತ್ ಹಾಗೂ ಪ್ರಜ್ವಲ್ ಇವರು ವಿಜ್ಞಾನಿಗಳ ಭಾವಚಿತ್ರಗಳನ್ನು ನೀಡುವುದರ ಮೂಲಕ ಗಣಿತ ದಿನದ ಮೆರಗನ್ನು ಹೆಚ್ಚಿಸಿದರು.ಮಧ್ಯವಾರ್ಷಿಕ ಪರೀಕ್ಷೆಯ ಗಣಿತ ವಿಷಯದಲ್ಲಿ ಶೇ 90 ಕ್ಕಿಂತ ಅಧಿಕ ಅಂಕಗಳಿಸಿದ ಸುಮಾರು 6 ವಿದ್ಯಾರ್ಥಿಗಳನ್ನು ಪ್ರಾಂಶುಪಾಲ ಕೆ .ಪಿ .ಲಕ್ಷ್ಮೀನಾರಾಯಣ, ಉಪನ್ಯಾಸಕ ಪ್ರವೀಣ್ ಕುಮಾರ್ ಶೆಟ್ಟಿ, ಭುವನೇಶ್ವರ್ ಹೋಟೆಲಿನ ನಿತ್ಯಾನಂದ ಪ್ರಭು, ಗಣೇಶ ದುಗ್ಗೋಟ್ಟು, ಸುಚೇತ್ ಬನಾನ್, ಹಾಗ್ ಅಕ್ಷಯ್ ನಲ್ಲೂರು ಇವರ ಸಹಕಾರದೊಂದಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಪ್ರಾಂಶುಪಾಲರಾದ ಕೆ.ಪಿ. ಲಕ್ಷ್ಮಿನಾರಾಯಣ ಇವರು ವಿದ್ಯಾರ್ಥಿಗಳಲ್ಲಿ ಆಸಕ್ತಿ ಇದ್ದರೆ ಕಬ್ಬಿಣದ ಕಡಲೆ ಕಾಯಿಯಂತಿರುವ ಗಣಿತವನ್ನು ಸವಿಯಾದ ಹಾಗೂ ಮೃದುವಾದ ಕಡಲೆಕಾಯಿಯನ್ನಾಗಿ ಪರಿವರ್ತಿಸಬಹುದು ಎಂದು ಅಭಿಪ್ರಾಯಪಟ್ಟರು. ಸಮಾರಂಭದಲ್ಲಿ ಉಪನ್ಯಾಸಕರಾದ ಬಾಲಕೃಷ್ಣರಾವ್, ವೀರೇಂದ್ರ ವಿ. ಪಿ ,ಶ್ರೀಮತಿ ವನಿತಾ, ,ಸರ್ವೇಶ್ವರ್ ಹೆಚ್.ಪಿ, ಉಪಸ್ಥಿತರಿದ್ದರು.
ಉಪನ್ಯಾಸಕರಾದ ಶ್ರೀಮತಿ ಶ್ಯಾಮಲಾ ನಾಯ್ಕ ಸ್ವಾಗತಿಸಿ ಸೌಮ್ಯಕುಮಾರಿ ವಂದಿಸಿದರು.ಕನ್ನಡ ಉಪನ್ಯಾಸಕರಾದ
ವಿಕ್ರಂ ಇವರು ಕಾರ್ಯಕ್ರಮ ನಿರೂಪಿಸಿದರು.
Kshetra Samachara
23/12/2021 04:18 pm