ಮುಲ್ಕಿ: ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಚಿತ್ರಾಪು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೂರನೇ ವರ್ಷ ಆಚರಿಸುತ್ತಿದ್ದು ಲಯನ್ಸ್ ಕ್ಲಬ್ ಮುಲ್ಕಿ ಹಾಗೂ ಲಿಯೋ ಕ್ಲಬ್ ಮುಲ್ಕಿ ವತಿಯಿಂದ ಲ. ಹರೀಶ್ ಪುತ್ರನ್ ಮತ್ತು ಲಿಯೋ ಸೃಜನ್ ಎಚ್ ಪುತ್ರನ್ ಕೊಡಮಾಡಿದ ಬೆಂಚ್ ಮತ್ತು ಡೆಸ್ಕುಗಳನ್ನು ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿನೋದ್ ಎಸ್ ಸಾಲ್ಯಾನ್ ಬೆಳ್ಳಾಯರು ವಹಿಸಿದ್ದರು.
ಈ ಸಂದರ್ಭ ಮಾಜಿ ಅಧ್ಯಕ್ಷರುಗಳಾದ ಮೋಹನ್ ದಾಸ್ ಶೆಟ್ಟಿ, ಸದಾಶಿವ ಹೊಸದುರ್ಗ, ಹರೀಶ್ ಪುತ್ರನ್ ಶಾಲಾ ಮುಖ್ಯೋಪಾಧ್ಯಾಯರು, ಲಿಯೋ ಕ್ಲಬ್ ಅಧ್ಯಕ್ಷರಾದ ಸೃಜನ್ ಎಚ್ ಪುತ್ರನ್, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಉಪಾಧ್ಯಕ್ಷರು, ಶರ್ಮಿಳಾ ಹರೀಶ್ ಪುತ್ರನ್, ಅರುಣ ಶೆಟ್ಟಿ ಉಪಸ್ಥಿತರಿದ್ದರು.
Kshetra Samachara
03/12/2021 12:13 pm