ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಂಭ್ರಮದ ದೀಪೋತ್ಸವ

ಕಟೀಲು: ಇತಿಹಾಸ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬಹುಳ ಪಂಚಮಿಯಂದು ದೀಪೋತ್ಸವ ದೇವಳದ ತಂತ್ರಿಗಳಾದ ಶಿಬರೂರು ವೇದವ್ಯಾಸ ತಂತ್ರಿಗಳ ನೇತೃತ್ವದಲ್ಲಿ ವಿಜ್ರಂಭಣೆಯಿಂದ ನಡೆಯಿತು.

ದೇವಸ್ಥಾನದ ರಥಬೀದಿಯಲ್ಲಿ ದೇವರ ಬಲಿ ಉತ್ಸವ ನಡೆದು ದೇವರನ್ನು ಚಂದ್ರಮಂಡಲ ರಥದಲ್ಲಿ ಕುಳ್ಳಿರಿಸಿ ರಥೋತ್ಸವ ನಡೆಯಿತು.

ಬಳಿಕ ಕಟೀಲಿನ ಬ್ರಾಮರಿ ವನದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯಿತು. ತರಕಾರಿ ಹಣ್ಣುಹಂಪಲುಗಳಿಂದ ಅಲಂಕೃತಗೊಂಡ ಗುರ್ಜಿಯಲ್ಲಿ ದೇವರ ವಿಶೇಷ ಪೂಜೆ ನಡೆಯಿತು.

ಈ ಸಂದರ್ಭ ಮಾಜಿ ಸಚಿವ ಅಭಯಚಂದ್ರ ಜೈನ್, ಕಟೀಲು ಕ್ಷೇತ್ರದ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಪದ್ಮನಾಭ ಅಸ್ರಣ್ಣ, ಹರಿ ನಾರಾಯಣ ಆಸ್ರಣ್ಣ,ಬಿಪಿನ್ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

24/11/2021 09:39 pm

Cinque Terre

4.65 K

Cinque Terre

0

ಸಂಬಂಧಿತ ಸುದ್ದಿ