ಮುಲ್ಕಿ: ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ದೀಪೋತ್ಸವ ಸಂಭ್ರಮದಿಂದ ನಡೆಯಿತು.
ದೀಪೋತ್ಸವದ ಪ್ರಯುಕ್ತ ದೇವಸ್ಥಾನದ ಸುತ್ತಲೂ ರಂಗೋಲಿ ಹಾಗೂ ಹಣತೆ ದೀಪಗಳಿಂದ ಶೃಂಗರಿಸಲಾಗಿತ್ತು.
ಈ ಸಂದರ್ಭ ದೇವರಿಗೆ ವಿಶೇಷ ಆರತಿ ಹಾಗೂ ತುಳಸಿ ಪೂಜೆ ನಡೆಯಿತು.
ದೇವಸ್ಥಾನದ ಒಳಪ್ರಾಂಗಣದಲ್ಲಿ ಲಕ್ಷ್ಮೀ ಸಹಿತ ಹಯಗ್ರೀವ ಮೂರ್ತಿ ಎದುರು ಬದಿ ವಿಠ್ಠಲ ಮೂರ್ತಿ, ಹೊರ ಪ್ರಾಂಗಣದಲ್ಲಿ ಶೃಂಗಾರಗೊಂಡ ಶ್ರೀ ಶಾರದೆಯ ಮೂರ್ತಿ ಗಮನ ಸೆಳೆಯುತ್ತಿತ್ತು.
Kshetra Samachara
15/11/2021 11:00 pm