ಕಟೀಲು: ಶಿಕ್ಷಣ ಸಂಸ್ಥೆಗಳ ಸಂಯೋಜನೆಯಲ್ಲಿ ನಡೆದ ಭ್ರಮರ ಇಂಚರ ನುಡಿಹಬ್ಬದ ಸಮಾರೋಪ ಸಮಾರಂಭದಲ್ಲಿ ಸಾಧಕ ಹಳೆ ವಿದ್ಯಾರ್ಥಿ ಖ್ಯಾತ ವೈದ್ಯ ತುಳು ಕನ್ನಡ ಸಾಹಿತಿ ಡಾ. ಭಾಸ್ಕರಾನಂದ ಕುಮಾರ್ ಅವರಿಗೆ ಸಾಧಕ ವಿದ್ಯಾರ್ಥಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಅದಾನಿ ಸಂಸ್ಥೆ ಅಧ್ಯಕ್ಷ ಕಿಶೋರ್ ಆಳ್ವ, ಸಿಎಪಿಎಸ್ ನಿರ್ದೇಶಕ ಸಿಎ ಚಂದ್ರಶೇಖರ ಶೆಟ್ಟಿ ಅವರನ್ನು ಸಾಧಕ ವಿದ್ಯಾರ್ಥಿಗಳು ಎಂದು ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸಮ್ಮೇಳನಾಧ್ಯಕ್ಷ ಶ್ರೀಧರ ಡಿಎಸ್ ಮಕ್ಕಳಲ್ಲಿ ಹೊಸ ಉತ್ಸಾಹ, ಭಾಷೆಯ ಬಗ್ಗೆ ಅಭಿಮಾನ ನಾಡಿನ ಬಗ್ಗೆ ಪ್ರೀತಿ ಹೆಚ್ಚಲು ಅರಿಯಲು ಇಂತಹ ಸಮ್ಮೇಳನಗಳು ಪ್ರೇರಣಾದಾಯಕ ಎಂದರು.
ಬೆಂಗಳೂರಿನ ಉದ್ಯಮಿ ರಾಜೇಶ್ ಶೆಟ್ಟಿ, ಸಿಎ ದಿವಾಕರ ರಾವ್, ಪ್ರಭಾಕರ ರಾವ್ ಸಿತ್ಲ, ಹರಿಕೃಷ್ಣ ಪುನರೂರು ಭುವನಾಭಿರಾಮ ಉಡುಪ, ಪ್ರದೀಪ ಕಲ್ಕೂರ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ ಅನಂತ ಆಸ್ರಣ್ಣ, ರತ್ನಾಕರ ಶೆಟ್ಟಿ, ಸುಬ್ರಹ್ಮಣ್ಯ ಪ್ರಸಾದ್ ಮಧುಕರ ಅಮೀನ್, ಡಾ. ಶಶಿಧರ ಕೋಟ್ಯಾನ್, ಕಟೀಲು ದೇಗುಲದ ಆಡಳಿತ ಸಮಿತಿಯ ಸನತ್ ಕುಮಾರ ಶೆಟ್ಟಿ, ಬಿಪಿನ್ ಪ್ರಸಾದ ಶೆಟ್ಟಿ, ಕಸ್ತೂರಿ ಪಂಜ, ಆನಂದ ಅಜಿಲ, ಲಿಂಗಪ್ಪ ಕಟೀಲು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
Kshetra Samachara
14/11/2021 08:50 pm