ಕಾರ್ಕಳ: ಕಾರ್ಕಳದ ಯೂತ್ ಫಾರ್ ಸೇವಾ ವತಿಯಿಂದ ಸರಕಾರಿ ಶಾಲೆಯ 6 ನೇ ಮತ್ತು 7ನೇ ತರಗತಿಯ ಮಕ್ಕಳಿಗೆ ಉಚಿತ ಸ್ಕೂಲ್ ಬ್ಯಾಗ್ ಮತ್ತು ಲೇಖನ ಪರಿಕರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಉಷಾ ತಮಂಕರ್ ಅವರು ವಹಿಸಿದ್ದರು . ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಪದಾಧಿಕಾರಿಗಳು ಆಗಿರುವ ಸಮಾಜ ಸೇವಕಿ ಶ್ರೀಮತಿ ರಮಿತಾ ಶೈಲೇಂದ್ರ ಮತ್ತು ಗಣೇಶ್ ಸಾಲ್ಯಾನ್, ಸಾಣೂರು ಗ್ರಾಮ ಪಂಚಾಯತ್ ಸದಸ್ಯರಾಗಿರುವ ಕರುಣಾಕರ ಕೋಟ್ಯಾನ್, ಕಾರ್ಕಳ ಶಿಕ್ಷಣ ಇಲಾಖೆಯ ಬಿ. ಆರ್. ಪಿ. ಸಂತೋಷ್ ಶೆಟ್ಟಿ ಎಸ್ಡಿಎಂಸಿ ಅಧ್ಯಕ್ಷೆ ಶ್ರೀಮತಿ ಜಯಶ್ರೀ ದೇವಾಡಿಗ, ನಿಕಟಪೂರ್ವ ಅಧ್ಯಕ್ಷರು ಸೋಮನಾಥ ಮತ್ತು ಶಿಕ್ಷಕ ವೃಂದ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ಧ್ಯೇಯಗಳಲ್ಲಿ ಒಂದಾದ ಸಮಾಜಸೇವೆ ಮಾಡುವ ಮನೋಭಾವನೆಯನ್ನು ಬೆಳೆಸಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಯಪಡಿಸಿದರು. ಶಾಲೆಯ ಹಿರಿಯ ಶಿಕ್ಷಕಿ ಶ್ರೀಮತಿ ನಿರ್ಮಲ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
Kshetra Samachara
12/11/2021 01:14 pm