ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು: ನ.13, 14 ರಂದು 'ಕಾಡು ರಂಗಮಂದಿರ' ದಲ್ಲಿ ನಾಟಕೋತ್ಸವ ಸಂಭ್ರಮ

ಪುತ್ತೂರು:ನೆಹರೂ ನಗರದಲ್ಲಿರುವ 'ಕಾಡು ರಂಗಮಂದಿರ' ದಲ್ಲಿ ನ.13 ಮತ್ತು 14 ರಂದು ಎರಡು ದಿನಗಳ ನಾಟಕೋತ್ಸವ ಹಾಗೂ ನ.14 ರಂದು ಡಾ.ಶ್ರೀಧರ್ ಎಚ್.ಜಿ. ಅವರ 'ಪ್ರಸ್ಥಾನ' ಕಾದಂಬರಿಯ ಲೋಕಾರ್ಪಣೆ ನಡೆಯಲಿದೆ ಎಂದು ಕಾಡು ಬಳಗದ ರಾಘವೇಂದ್ರ ಎಚ್.ಎಂ. ತಿಳಿಸಿದ್ದಾರೆ.

ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾಟಕೋತ್ಸವದಲ್ಲಿ ಬಳ್ಳಾರಿಯ ಸಿಗಿಗೇರಿ ಧಾತ್ರಿ ರಂಗಯಾತ್ರೆ ತಂಡದಿಂದ ಎರಡು ನಾಟಕಗಳು ಪ್ರದರ್ಶನವಾಗಲಿದೆ. ನ.13 ರಂದು ಸಂಜೆ 7 ಗಂಟೆಗೆ 'ಮುದ್ದಣ್ಣನ ಪ್ರಮೋಷನ್ ಪ್ರಸಂಗ' ಮತ್ತು ನ.14 ರಂದು ಸಂಜೆ 7 ಗಂಟೆಗೆ 'ಬಾಹುಬಲಿ ವಿಜಯಂ' ನಾಟಕಗಳು ಪ್ರದರ್ಶವಾಗಲಿದೆ.

ಅದೇ ದಿನ ಸಂಜೆ 5.30ಕ್ಕೆ ಡಾ. ಶ್ರೀಧರ್ ಎಚ್.ಜಿ. ಬರೆದಿರುವ 'ಪ್ರಸ್ಥಾನ' ಕಾದಂಬರಿ ಅನಾವರಣಗೊಳ್ಳಲಿದೆ. ಕೃತಿಯನ್ನು ವಿವೇಕಾನಂದ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ. ಎಚ್. ಮಾಧವ ಭಟ್ ಬಿಡುಗಡೆಗೊಳಿಸಲಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ನಿರಂಜನ ವಾನಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಕೃತಿಕಾರ ಡಾ. ಶ್ರೀಧರ್ ಎಚ್.ಜಿ. ಮತ್ತು ರಾಘವೇಂದ್ರ ಎಚ್.ಎಂ. ಉಪಸ್ಥಿತರಿರುತ್ತಾರೆ.

ಕೋವಿಡ್ ನಿಯಮಾವಳಿಯಂತೆ ಕಾರ್ಯಕ್ರಮ ನಡೆಯಲಿದ್ದು, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ ಎಂದರು.

Edited By : Manjunath H D
Kshetra Samachara

Kshetra Samachara

11/11/2021 01:24 pm

Cinque Terre

6.26 K

Cinque Terre

0

ಸಂಬಂಧಿತ ಸುದ್ದಿ