ಕಾರ್ಕಳ: ದೀಪಾವಳಿ ಪ್ರಯುಕ್ತ ಹಿರಿಯಂಗಡಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಆಯೋಜಿಸಿರುವ ಗೂಡುದೀಪ ಹಾಗೂ ಮುದ್ದು ಶಾರದೆ ಸ್ಪರ್ಧೆಯಲ್ಲಿ ವಿಜೇತರ ವಿವರ ಈ ರೀತಿ ಇದೆ.
ಆಧುನಿಕ ವಿಭಾಗದಲ್ಲಿ ಯಶವಂತ ಕಾವೂರು ರವರ ಅಲ್ಯೂಮಿನಿಯಂ ಕ್ಯಾನ್ ನಿಂದ ತಯಾರಿಸಿದ ಗೂಡುದೀಪ ಪ್ರಥಮ, ಆದಿತ್ಯಭಟ್ ಗುರುಪುರರವರ ಶರ್ಟ್ ಬಟನ್ ಗೂಡುದೀಪ ದ್ವಿತೀಯ, ಮತ್ತು ವಿಠಲ್ ಭಟ್ ಮಂಗಳೂರು ಇವರ ನೆಲಕಡಲೆ ಮಂಜುಟ್ಟಿಯಲ್ಲಿ ತಯಾರಿಸಿದ ಗೂಡುದೀಪ ತೃತೀಯ ಸ್ಥಾನ ಪಡೆಯಿತು. ರಾಜೇಶ್ ಚಿಲಿಂಬಿ ಯವರ ಪೋಟೋ ಪಿಲ್ಮ್ ರೀಲಿನ ಗೂಡುದೀಪ ಜನಮೆಚ್ಚಿದ ಗೂಡುದೀಪ ಪ್ರಶಸ್ತಿಗೆ ಪಾತ್ರವಾಯಿತು.
ಸಾಂಪ್ರದಾಯಿಕ ವಿಭಾಗದಲ್ಲಿ ರಕ್ಷೀತ್ ಕೋಟೆಕಣಿ ಯವರ ಕೊರಗಜ್ಜನ ಮುಖವರ್ಣಿಯ ಗೂಡುದೀಪ ಪ್ರಥಮ, ರವಿರಾಜ್ ರವರ ಬಣ್ಣದ ಕಾಗದ ಗೂಡುದೀಪ ದ್ವಿತೀಯ, ಉಮೇಶ್ ರವರ ಬಣ್ಣಕಾಗದದ ಹೂವಿನ ಗೂಡುದೀಪ ತೃತೀಯ ಸ್ಥಾನ ಪಡೆಯಿತು. ವಿಠಲ್ ಭಂಡಾರಿಯವರ ದೇವಸ್ಥಾನದ ಪ್ರತಿಕೃತಿ ಗೂಡುದೀಪ ವಿಶೇಷ ಪ್ರೋತ್ಸಾಹಕ ಬಹುಮಾನ ಪಡೆಯಿತು.
ಇನ್ನು ಮುದ್ದು ಶಾರದೆ ಸ್ಪರ್ಧೆಯಲ್ಲಿ ಪಲ್ಲವಿ ಪ್ರಥಮ, ಅಪೂರ್ವ ದ್ವಿತೀಯ, ತನಿಷಾ ತೃತೀಯ ಸ್ಥಾನ ಪಡೆದರು. ಅನ್ವಿ ಜನಮೆಚ್ಚಿದ ಶಾರದೆ ಹಾಗೂ ಶ್ರಾವ್ಯ ವಿಶೇಷ ಪ್ರೋತ್ಸಾಹಕ ಬಹುಮಾನವನ್ನು ಪಡೆದರು. ವಿಜೇತರಿಗೆ ಚಿನ್ನದ ಪದಕ ಹಾಗೂ ಪ್ರಶಸ್ತಿ ಪತ್ರನೀಡಿ ಗೌರವಿಸಲಾಯಿತು.
ಮುಖ್ಯ ಅಥಿತಿಗಳಾಗಿ ತುಳು ಚಲನಚಿತ್ರ ನಿರ್ಮಾಪಕ ಅರುಣ್ ಕುಮಾರ್ ತೋಡಾರು, ಸಹನಾ ಸುರೇಂದ್ರ ಶೆಟ್ಟಿ, ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೆಸರರಾದ ಗಿರೀಶ್ ರಾವ್, ಸಿ.ಎ. ಪ್ರಭಾತ್ ಕುಮಾರ್ ಜೈನ್, ಪುರಸಭಾ ಸದಸ್ಯರಾದ ಯೋಗಿಶ್ ದೇವಾಡಿಗ, ಅವಿನಾಶ್ ಶೆಟ್ಟಿ, ಉದ್ಯಮಿ ನವೀನ್ ರಾವ್, ವಿನಯ್ ಕಾರ್ಡೋಜಾ, ರಮಾನಾಥ್ ರಾವ್, ಸತ್ಯಾರ್ಥಿ ಸಾಣೂರು, ಕಾರ್ಯಕ್ರಮದ ಅಯೋಜಕರಾದ ಪುರಸಭಾ ಸದಸ್ಯ ಶುಭದರಾವ್ ಮೊದಲಾದವರು ಉಪಸ್ಥಿತರಿದ್ದರು.
ಕಳೆದ ವರ್ಷದ ಮುದ್ದು ಶಾರದೆ ಪ್ರಶಸ್ತಿ ವಿಜೇತೆ ಸೃಷ್ಟಿ ಎಸ್ ರಾವ್ ಉದ್ಘಾಟಿಸಿದ್ದ ಕಾರ್ಯಕ್ರಮದಲ್ಲಿ ಆಶಾಲತಾ ನಿರೂಪಿಸಿ, ಪ್ರಸನ ಧನ್ಯವಾದವಿತ್ತರು.
Kshetra Samachara
08/11/2021 07:19 pm