ಹೆಬ್ರಿ: ಹೆಬ್ರಿ ಸಮೀಪದ ಮುನಿಯಾಲು ಸಂಜೀವಿನಿ ಫಾರ್ಮ್ ಮತ್ತು ಡೇರಿ ಗೋಧಾಮದಲ್ಲಿ ದೇಶಿಯ ತಳಿ ಹಸುಗಳಿಗೆ ಸಾಮೂಹಿಕ ಗೋ ಪೂಜೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಗೋವುಗಳಿಗೆ ಆರತಿ ಬೆಳಗಿಸಿ ಪ್ರಸಾದ ತಿನ್ನಿಸುವ ಮೂಲಕ, ಮೂಡಬಿದಿರೆ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ನಂತರ ಆಶೀರ್ವಚನ ನೀಡುತ್ತಾ ಗೋಪೂಜೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಗೋವಿನ ದೇಹದಲ್ಲಿ ಹಲವಾರು ದೇವತೆಗಳ ವಾಸ ಸ್ಥಾನವಿದೆ. ಆರ್ಯರು ಗೋವುಗಳನ್ನು ಸಾಕುವ ಮೂಲಕ ನಮಗೆ ಒಂದು ಸಂಸ್ಕೃತಿಯನ್ನು ತಿಳಿಸಿಕೊಟ್ಟಿದ್ದಾರೆ. ಹಾಗೆಯೇ ರಾಮಕೃಷ್ಣ ಪರಮಹಂಸರ ಧೇಯಗಳನ್ನೂ ಪಾಲಿಸುತ್ತಾ, ದೇಸಿ ತಳಿ ಸಾಕುವ ಉದ್ಯಮಿ ರಾಮಕೃಷ್ಣ ಆಚಾರ್ ಅವರಿಗೆ ಅಭಿನಂಧಿಸುತ್ತೇನೆ. ದೇಸಿ ತಳಿಗಳನ್ನು ಸಂರಕ್ಷಿಸಿ ಬೆಳೆಸುವುದು ನಿಜಕ್ಕೂ ಸವಾಲಿನ ಕೆಲಸ.ಆಚಾರ್ ರವರು ಮುನಿಯಾಲು ನಂತಹ ಪರಿಸರದಲ್ಲಿ ಇಂತಹ ವಿಸ್ತಾರವಾದ ಜಾಗದಲ್ಲಿ ಗೋಶಾಲೆಯನ್ನು ಸ್ಥಾಪಿಸಿ ಜನತೆಗೆ ಗೋವಿನ ಮಹತ್ವದ ಬಗ್ಗೆ ಮಾಹಿತಿ ನೀಡುವ ಕೆಲಸ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಸಂಜೀವಿನಿ ಪಾರ್ಮ್ ಮತ್ತು ಡೈರಿ ಟ್ರಸ್ಟಿ ಸವಿತಾ ಆರ್. ಆಚಾರ್, ಕಾರ್ಕಳದ ಪೊಲೀಸ್ ವೃತ್ತ ನಿರೀಕ್ಷಕ ರಾದ ಸಂಪತ್ ಕುಮಾರ್, ಕಾರ್ಕಳ, ಹೆಬ್ರಿ, ಅಜೇಕಾರ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್, ಮಂಗಳೂರು, ಮೂಡಬಿದ್ರಿ, ಉಡುಪಿ, ಕಾರ್ಕಳ, ಹೆಬ್ರಿ, ಮುನಿಯಾಲ್ ಪರಿಸರದ ಗಣ್ಯರು, ಉದ್ಯಮಿಗಳು ಉಪಸ್ಥಿತಿದ್ದರು.
Kshetra Samachara
05/11/2021 05:55 pm