ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ; ಕ್ರೈಸ್ತ ಬಾಂಧವರ ಮನೆಯಲ್ಲಿ ಸಾಮೂಹಿಕ ಗೋ ಪೂಜೆ !

ಉಡುಪಿ: ದೀಪಾವಳಿ ಸರ್ವಧರ್ಮೀಯರ ಹಬ್ಬ.ಬೆಳಕಿನ ಹಬ್ಬಕ್ಕೆ ಧರ್ಮಬೇಧ ಇಲ್ಲ ಎಂದು ಉಡುಪಿಯ ಕ್ರೈಸ್ತ ಬಾಂಧವರೊಬ್ಬರು ತೋರಿಸಿಕೊಟ್ಟಿದ್ದಾರೆ.ಹೌದು... ಕಿದಿಯೂರಿನ ಐರಿನ್ ಅಂದ್ರಾದೆಯವರ ಮನೆಯಲ್ಲಿ ಸ್ಥಳೀಯರು ಜೊತೆಗೂಡಿ ಗೋಪೂಜೆ ನಡೆಸಿದ್ದಾರೆ.ಅತ್ಯಂತ ಶ್ರದ್ಧಾಭಕ್ತಿಯಿಂದ ಬಲಿಪಾಡ್ಯ ದಿನದ ಈ ಸಂಪ್ರದಾಯ ಇಲ್ಲಿ ನಡೆಯಿತು.

ಸ್ಥಳೀಯ ಪರಿಸರದ ನಾಲ್ಕು ಗೋವುಗಳನ್ನು ಅಂದ್ರಾದೆಯವರ ಮನೆಯಲ್ಲಿ ಸಾಮೂಹಿಕವಾಗಿ 30ಕ್ಕೂ ಹೆಚ್ಚು ಗೋ ಭಕ್ತರು ಪೂಜಿಸುವುದರ ಮೂಲಕ ಧನ್ಯರಾದರು. ಗೋಪೂಜೆಯ ಎಲ್ಲಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಹೆತ್ತ ಮಾತೆ ಮಗುವಿಗೆ ತಾತ್ಕಾಲಿಕವಾಗಿ ಹಾಲುಣಿಸಿದರೆ, ಗೋಮಾತೆ ಎಲ್ಲರಿಗೂ ಬದುಕಿಡೀ ಹಾಲುಣಿಸುವುದರಿಂದ ಮಾತೆಗೂ ಮಿಗಿಲಾದ ಗೋಮಾತೆಯನ್ನು ಪೂಜಿಸುವ ರಕ್ಷಿಸುವ ಹೊಣೆ ನಮ್ಮೆಲ್ಲರ ಜವಾಬ್ದಾರಿ ಎಂದು ಗೋಪೂಜೆ ನಡೆಸಿದ ಐರಿನ್ ಅಂದ್ರಾದೆ ಹೇಳಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಭಾಗವಹಿಸಿ ಅಂದ್ರಾದೆ ಕುಟುಂಬ ಜಾತಿ ಮತ ಮೀರಿ ಸಮಾಜಕ್ಕೆ ಮಾಡುವ ಸಂಸ್ಕಾರಯುತ ಕೆಲಸ ಮಾದರಿ ಎಂದರು.

Edited By : PublicNext Desk
Kshetra Samachara

Kshetra Samachara

05/11/2021 04:38 pm

Cinque Terre

9.35 K

Cinque Terre

0

ಸಂಬಂಧಿತ ಸುದ್ದಿ