ಮಲ್ಪೆ: ರಾಜ್ಯೋತ್ಸವ ಪ್ರಯುಕ್ತ ರಾಜ್ಯಾದ್ಯಂತ ಇಂದು ಹನ್ನೊಂದು ಗಂಟೆಗೆ ಸಮೂಹ ಗಾಯನ ನಢಯುತ್ತಿದೆ.ಈ ಹಿನ್ನೆಲೆಯಲ್ಲಿ
ಚಲಿಸುವ ಬೋಟಿನಲ್ಲೂ ಕನ್ನಡ ಗೀತೆಗಳು ಅನುರಣಿಸಿದವು.ಮಲ್ಪೆ ಬೀಚ್ ನಿಂದ ಸಾಗಿದ ಬೋಟಲ್ಲಿ ನೂರಕ್ಕೂ ಅಧಿಕ ಗಾಯಕರಿಂದ ಸಮೂಹ ಗಾಯನ ನಡೆಯಿತು.
ಮಲ್ಪೆ ಮತ್ತು ಸೈಂಟ್ ಮೇರಿಸ್ ದ್ವೀಪದ ನಡುವೆ ಇದಕ್ಕೆಂದೇ ಬೋಟ್ ವ್ಯವಸ್ಥೆ ಮಾಡಲಾಗಿತ್ತು.ಸಮುದ್ರದಲ್ಲಿ ಮೊಳಗಿದ ಕನ್ನಡ ಗೀತೆಗಳಿಗೆ ಅಲೆಗಳು ಸಾಥ್ ನೀಡಿದವು.ಸಿಂಗಾರಗೊಂಡ ಬೋಟ್ ವಯ್ಯಾರದಿಂದ ತೇಲುತ್ತಾ ಹೊಸ ಲೋಕವನ್ನೇ ಸೃಷ್ಟಿಸಿತು.
Kshetra Samachara
28/10/2021 04:13 pm