ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: "ಸಮಾಜದ ಒಳಿತು- ಕೆಡುಕು ಹತ್ತಿರದಿಂದ ನೋಡುವವರು ಪೊಲೀಸರು"

ಉಡುಪಿ: ಸಮಾಜದ ಒಳಿತು- ಕೆಡುಕುಗಳನ್ನು ಹತ್ತಿರದಿಂದ ನೋಡುವ ವ್ಯಕ್ತಿಗಳೆಂದರೆ ಅವರು ಪೊಲೀಸರು. ಸಮಾಜದಲ್ಲಿ ಪೊಲೀಸರ ಸೇವೆ ಅತ್ಯಂತ ಪವಿತ್ರವಾದದ್ದು ಎಂದು ಕರಾವಳಿ ಕಾವಲು ಪಡೆ ಹಾಗೂ ಎಎನ್ಎಫ್ ಅಧೀಕ್ಷಕ ನಿಖಿಲ್ ಬಿ. ಅಭಿಪ್ರಾಯ ಪಟ್ಟಿದ್ದಾರೆ.

ಅವರು ಬಡಗಬೆಟ್ಟು ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ಜಗನ್ನಾಥ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ 7ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿದರು.

ನಿವೃತ್ತ ಪೊಲೀಸರು ಆರೋಗ್ಯದ ಕಡೆ ಗಮನ ನೀಡುವುದು ಅತೀ ಮುಖ್ಯ. ದೈಹಿಕ ಆರೋಗ್ಯದ ಜೊತೆ ಮಾನಸಿಕ ಆರೋಗ್ಯವೂ ಮುಖ್ಯ. ಆದ್ದರಿಂದ ನಿವೃತ್ತ ಪೊಲೀಸರಿಗೆ ಮಾನಸಿಕ ಆರೋಗ್ಯದ ಕುರಿತು ಕಾರ್ಯಾಗಾರ ನಡೆಸಿ ಅದಕ್ಕೆ ಎಲ್ಲ ವ್ಯವಸ್ಥೆ ಮಾಡಲಾಗುವುದು ಎಂದರು.

ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಇಷ್ಟೊಂದು ಉತ್ತಮ ನಿವೃತ್ತ ಪೊಲೀಸರ ಕ್ಷೇಮಾಭಿವೃದ್ಧಿ ಸಂಘ ರಾಜ್ಯದ ಬೇರೆಲ್ಲೂ ಇಲ್ಲ. ರಾಜ್ಯಕ್ಕೆ ಈ ಸಂಘ ಮಾದರಿ ಎಂದರು.

ಈ ಸಂದರ್ಭ ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಮುಖ್ಯಮಂತ್ರಿ ಪದಕ ಪುರಸ್ಕೃತ ನಿವೃತ್ತ ಪೊಲೀಸ್ ಅಧೀಕ್ಷಕ ಎಂ. ಮಂಜುನಾಥ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಉದ್ಯಮಿ ಗಣೇಶ್ ದೇವಾಡಿಗ, ಸಂಘದ ಅಧ್ಯಕ್ಷ ಡಾ.ಬಿ. ಪ್ರಭುದೇವ ಮಾನೆ, ನಿವೃತ್ತ ಪೊಲೀಸ್ ಅಧೀಕ್ಷಕ ಸುಧಾಕರ್ ಶೆಟ್ಟಿ, ಹೆಚ್.ಡಿ. ಮೆಂಡೋನ್ಸಾ ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

16/10/2021 05:08 pm

Cinque Terre

17.1 K

Cinque Terre

0

ಸಂಬಂಧಿತ ಸುದ್ದಿ