ಮುಲ್ಕಿ:ಕಟೀಲು ದಿ. ಗೋಪಾಲಕೃಷ್ಣ ಆಸ್ರಣ್ಣ ರ ಸಂಸ್ಮರಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಶನಿವಾರ ಸಂಜೆ ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೊಸದಿಗಂತ ಪತ್ರಿಕೆಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಪಿ. ಎಸ್ ವಹಿಸಿ ಮಾತನಾಡಿ ದಿ. ಆಸ್ರಣ್ಣರು ರಾಷ್ಟ್ರದ ಚಿಂತನೆಗೆ ಸಂಕಲ್ಪ ಮಾಡಿದ ಮಹಾನ್ ವ್ಯಕ್ತಿ ಯಾಗಿದ್ದರು,ಅವರ ಪ್ರಾಮಾಣಿಕತೆ ಮತ್ತು ಬಂದುತ್ವವನ್ನು ಜನ ಗುರುತಿಸ್ತಾರೆ ಎನ್ನುವುದಕ್ಕೆ ಈ ಕಾರ್ಯಕ್ರಮ ಸಾಕ್ಷಿ ಎಂದರು.
ವಿಶ್ವ ಹಿಂದೂ ಪರಿಷತ್ ರಾಜ್ಯಾಧ್ಯಕ್ಷ ಎಂ. ಬಿ. ಪುರಾಣಿಕ್ ಸಂಸ್ಮರಣ
ಕಾರ್ಯಕ್ರಮದಲ್ಲಿ ಮಾತನಾಡಿ ಕಟೀಲು ದಿ. ಗೋಪಾಲಕೃಷ್ಣ ಆಸ್ರಣ್ಣರು ಕ್ಷೇತ್ರದಲ್ಲಿ ಜಾತಿಭೇದವಿಲ್ಲದೆ ಭಕ್ತರ ಜೊತೆ ಸೇರಿಕೊಂಡು ಸಮಾಜಮುಖಿ ಚಿಂತನೆಗಳೊಂದಿಗೆ ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸಿದ ಮಹಾನ್ ವ್ಯಕ್ತಿ. ಅವರ ಆದರ್ಶಗಳನ್ನು ಇಂದಿನ ಯುವ ಜನಾಂಗ ಮೈಗೂಡಿಸಿಕೊಳ್ಳಬೇಕಾಗಿದೆ ಎಂದರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಮಂಗಳೂರು ಒಎಂಪಿಎಲ್ ಡಿ.ಜಿ. ಎಂ ಆರ್. ಕೆ. ರಾವ್ , ಉದ್ಯಮಿ ಪ್ರವೀಣ್ ಆಳ್ವ, ಕಸಾಪದ ಮಾಜೀ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ದ. ಕ. ಜಿಲ್ಲಾ ಕಸಪಾ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ಉದ್ಯಮಿ ರವೀಂದ್ರ ಶೇಟ್, ಮೂಡಬಿದಿರೆ ಉದ್ಯಮಿ ಶ್ರೀಪತಿ ಭಟ್, ಯುಗಪುರುಷದ ಕೆ. ಭುವನಾಭಿರಾಮ ಉಡುಪ, ಪಟೇಲ್ ವಾಸುದೇವರಾವ್, ರಾಮಮೂರ್ತಿರಾವ್, ಸುಧಾಕರ್ ರಾವ್ ಪೇಜಾವರ, ಸುಕುಮಾರ ಮನೋಳಿತ್ತಾಯ, ಶಶಿಧರ ಐತಾಳ ಪಣಂಬೂರು, ಕದ್ರಿ ನವನೀತ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾಸರಗೋಡಿನ ಮಧೂರು ದೇವಸ್ಥಾನದ ಅರ್ಚಕ ವಿ. ಶ್ರೀಕೃಷ್ಣ ಉಪಾಧ್ಯಾಯ ರವರಿಗೆ ಅರ್ಚಕ ಪ್ರಶಸ್ತಿ,
ಕಟೀಲು ಮೇಳದ ಕಲಾವಿದ ( ಆಸ್ರಣ್ಣ ಅಭಿಮಾನಿ ಬಳಗ ಕದ್ರಿ ) ರವರಿಂದ ಲಕ್ಷ್ರಣ್ ಕೋಟ್ಯಾನ್ ಪೆರಾರ ರವರಿಗೆ ದಿ. ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ ಪ್ರದಾನ ಹಾಗೂ ಹರಿಪಾದೆ ಪಂಜ ಕೊಯಿಕುಡೆ ಶ್ರೀ ಲಕ್ಷ್ಮೀ ಶ್ರೀನಿವಾಸ ಮಠದ ಕೆ. ಬಿ. ವೆಂಕಟೇಶ ರಾವ್ ರವರಿಗೆ ಮೊಕ್ತೇಸರ ಪ್ರಶಸ್ತಿ ನೀಡಿ ವಿಷೇಶ ಪುರಸ್ಕಾರ ಸನ್ಮಾನಿಸಲಾಯಿತು.
ಡಾ.ಪದ್ಮನಾಭ ಭಟ್ ಎಕ್ಕಾರು,ನಾಟಿ ವೈದ್ಯ ಶ್ರೀನಿವಾಸ ಪೂಜಾರಿ, ಡಾ. ಭಾಸ್ಕರಾನಂದ ಭಟ್ ರವರನ್ನು ವಿಶೇಷ ಸಾಧನೆಗೆ ಗೌರವಿಸಲಾಯಿತು.
ಸಂಘಟಕ ಅರ್ಚಕ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಸ್ವಾಗತಿಸಿದರು. ಗುರುಪ್ರಸಾದ್ ಭಟ್ ಧನ್ಯವಾದ ಅರ್ಪಿಸಿದರು. ಶರತ್ ನಿರೂಪಿದರು. ಬಳಿಕ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಅಸಿಕಾ ಪರಿಣಯ - ಶತಧನ್ವ ವಧೆ ಯಕ್ಷಗಾನ ಬಯಲಾಟ ನಡೆಯಿತು.
Kshetra Samachara
25/09/2021 09:46 pm