ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಪುಸ್ತಕ ಪ್ರೀತಿ; ಗ್ರಾಮಗಳ ವಿದ್ಯಾರ್ಥಿಗಳು ,ಯುವಕರು, ಪೋಷಕರಿಗೆ ಪುಸ್ತಕ ವಿತರಣೆ

ಕುಂದಾಪುರ: ಪಠ್ಯಪುಸ್ತಕ ಸಮಿತಿಯ ಆದೇಶದ ಮೇರೆಗೆ ಉಡುಪಿ ಜಿಲ್ಲೆಯಾದ್ಯಂತ ಗ್ರಾಮ ಪಂಚಾಯತ್ ಗಳಿಗೆ ಪುಸ್ತಕಗಳನ್ನು ವಿತರಿಸಲಾಗುತ್ತಿದೆ.ಉಡುಪಿ ಜಿಲ್ಲೆಯ ಏಳು ತಾಲೂಕಿನ ಗ್ರಾಮಗಳಿಗೆ ಡಿಡಿಪಿಐ ಎಚ್ ಎನ್ ನಾಗೂರ ಪಠ್ಯಪುಸ್ತಕಗಳ ಜೊತೆಗೆ ನೀತಿ ಕಥೆಗಳು ,ಕಾದಂಬರಿ, ಕವನ ಸಂಕಲನ, ಕಥೆ ಸಹಿತ ಹಲವು ಪ್ರಕಾರದ ಪುಸ್ತಕಗಳನ್ನು ನೀಡಿದ್ದಾರೆ.

1 ರಿಂದ ೭ನೇ ತರಗತಿಯವರೆಗೆ ಎರಡು ಸೆಟ್ ಪುಸ್ತಕ ವಿತರಣೆ ಮಾಡಲಾಯ್ತು. ಮಕ್ಕಳಲ್ಲಿ ಶಾಲಾ ಅವಧಿಯ ನಂತರವೂ ಓದುವ ಹವ್ಯಾಸ ಬೆಳೆಸುವುದರ ಜೊತೆಗೆ, ಯುವಕರಲ್ಲಿ, ಗ್ರಾಮಸ್ಥರಲ್ಲಿ ಓದುವ ಹವ್ಯಾಸವನ್ನು ಹುಟ್ಟಿಸುವ ಉದ್ದೇಶದಿಂದ ಪುಸ್ತಕ ವಿತರಿಸಲಾಗುತ್ತಿದೆ.ಗ್ರಾಮದ ಯುವಕರು ಗ್ರಂಥಾಲಯಗಳನ್ನು ಬಳಸಬೇಕು. ಪುಸ್ತಕ, ದಿನಪತ್ರಿಕೆ ಓದುವುದರ ಜೊತೆಗೆ ಈಗಿನ ಪಠ್ಯಕ್ಕೆ ಪೂರಕವಾಗುವಂತೆ ಪೋಷಕರು ಪುಸ್ತಕಗಳನ್ನು ಓದಿ‌ಕೊಳ್ಳಬೇಕು. ಮಕ್ಕಳ ಭವಿಷ್ಯದ ಓದಿಗೆ, ಮಕ್ಕಳ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ದತೆಗಾಗಿ ಮನೆಯಲ್ಲಿ ಪೋಷಕರು ಸಹಾಯ ಮಾಡಬೇಕು ಎಂದು ಡಿಡಿಪಿಐ ಕರೆ ನೀಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಗ್ರಾಮ‌ಪಂಚಾಯತಿಯ ಗ್ರಾಮೀಣ ಗ್ರಂಥಾಲಯಗಳಿಗೂ ಮುಂದಿನ ದಿನಗಳಲ್ಲಿ ಪುಸ್ತಕಗಳನ್ನು ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

Edited By : Nagesh Gaonkar
Kshetra Samachara

Kshetra Samachara

24/09/2021 05:20 pm

Cinque Terre

9.16 K

Cinque Terre

0

ಸಂಬಂಧಿತ ಸುದ್ದಿ