ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಸರ್. ಎಂ.ವಿಶ್ವೇಶ್ವರಯ್ಯನವರ ಆದರ್ಶಗಳನ್ನು ಪಾಲಿಸಿ; ಜೀವನ್ ಶೆಟ್ಟಿ

ಮುಲ್ಕಿ: ಮುಲ್ಕಿ ರೋಟರಿ ಕ್ಲಬ್ ಮತ್ತು ಶಾರದಾ ಇನ್ಫ್ರಾರೆಡ್ ಡಿಸೈನ್ ಸಹ ಯೋಗದೊಂದಿಗೆ ಪಟ್ಟಣದ ರೋಟರಿ ಕ್ಲಬ್ ಸಭಾಭವನದಲ್ಲಿ "ಇಂಜಿನಿಯರ್ಸ್ ಡೇ" ಆಚರಣೆ ಹಾಗೂ ಸಾಧಕ ಇಂಜಿನಿಯರ್‌ಗಳಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ಶಿವರಾಮ್ ಜಿ ಅಮೀನ್ ವಹಿಸಿದ್ದರು. ಶಾರದಾ ಇನ್ಫ್ರಾರೆಡ್ ಡಿಸೈನ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಜೀವನ್ ಕೆ. ಶೆಟ್ಟಿ ಮಾತನಾಡಿ, ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯನವರ ಆದರ್ಶಗಳನ್ನು ಪಾಲಿಸಿಕೊಂಡು ಅಭಿವೃದ್ಧಿಗೆ ಪಣತೊಡೋಣ. ತಮ್ಮ ನೂತನ ಯೋಜನೆಯಾದ ಹಸಿರು ಮುಲ್ಕಿ ಕಾರ್ಯಕ್ರಮ ನಾಗರಿಕರ ಸಹಕಾರ ಅಗತ್ಯ ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಸೀತಾರಾಮ್ ಆಚಾರ್ ಅವರನ್ನು ಸನ್ಮಾನಿಸಲಾಯಿತು. ಮುಲ್ಕಿ ವ್ಯಾಪ್ತಿಯ ಎಲ್ಲಾ ಇಂಜಿನಿಯರ್‌ಗಳನ್ನು ಹಾಗೂ ಮುಲ್ಕಿ ರೋಟರಿ ಕ್ಲಬ್ ಗೆ ವಿಶೇಷ ಸಹಕಾರ ನೀಡಿದ ಶಾರದಾ ಇನ್ಫ್ರಾರೆಡ್ ಡಿಸೈನ್ ನ ಮ್ಯಾನೇಜಿಂಗ್ ಡೈರೆಕ್ಟರ್ ಜೀವನ್ ಕೆ ಶೆಟ್ಟಿ ರವರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ರೋಟರಿ ಅಸಿಸ್ಟೆಂಟ್ ಗವರ್ನರ್ ಅರುಣ್ ಭಂಡಾರಿ, ರೊ. ನಾರಾಯಣ್, ಜಿನರಾಜ್, ಕಾರ್ಯಕ್ರಮದ ನಿರ್ದೇಶಕ ಅಬ್ಬಾಸ್ ಆಲಿ, ಕಾರ್ಯದರ್ಶಿ ರವಿಚಂದ್ರ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

15/09/2021 08:44 pm

Cinque Terre

4.18 K

Cinque Terre

0

ಸಂಬಂಧಿತ ಸುದ್ದಿ