ಮೂಡುಬಿದಿರೆ: ಕಂಬಳ ಅಕಾಡೆಮಿಯ ವತಿಯಿಂದ ಸೆ.19ರಂದು ನಡೆಯುವ 2021-22ನೇ ಸಾಲಿನ ಓಟಗಾರರ ತರಬೇತಿ ಶಿಬಿರಕ್ಕೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ಕಡಲಕೆರೆ ನಿಸರ್ಗಧಾಮದಲ್ಲಿರುವ ಕೋಟಿ ಚೆನ್ನಯ ಕಂಬಳದ ಕರೆ ಹಾಗೂ ಸೃಷ್ಟಿ ಸಭಾಂಗಣದಲ್ಲಿ ಮಂಗಳವಾರ ನಡೆಯಿತು. ಶಿಬಿರದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ 219 ಮಂದಿ ಅಭ್ಯರ್ಥಿಗಳು ಭಾಗವಹಿಸಿದರು.
ಕೋವಿಡ್ ಮುಂಜಾಗ್ರತ ಕ್ರಮದೊಂದಿಗೆ ಆರಂಭಗೊAಡ ಆಯ್ಕೆ ಪ್ರಕ್ರಿಯೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಯಿತು.
ಶಾಸಕ ಉಮಾನಾಥ್ ಕೋಟ್ಯಾನ್ ಆಯ್ಕೆ ಪ್ರಕ್ರಿಯೆ ಶಿಬಿರಕ್ಕೆ ಚಾಲನೆ ನೀಡಿದರು.
ಕಂಬಳ ಅಕಾಡೆಮಿಯ ಸಂಚಾಲಕ ಗುಣಪಾಲ ಕಡಂಬ, ಕೊಳಕೆ ಇರ್ವತ್ತೂರು ಭಾ
ಸ್ಕರ ಕೋಟ್ಯಾನ್, ಕಂಬಳ ಅಕಾಡೆಮಿಯ ನಿರ್ದೇಶಕ ಸುರೇಶ್ ಕೆ ಪೂಜಾರಿ, ಬಂಟ್ವಾಳ ಮಹಾಕಾಳಿಬೆಟ್ಟು ಸೀತಾರಾಮ ಶೆಟ್ರು, ಸರಪಾಡಿ ಜೋನ್ ಸಿರಿಲ್ ಡಿಸೋಜ (ಅಪ್ಪಣ್ಣ) ಮತ್ತಿತರರು ಉಪಸ್ಥಿತರಿದ್ದರು.
ಕಂಬಳ ಅಕಾಡೆಮಿಯ ಸಂಚಾಲಕ ಗುಣಪಾಲ ಕಡಂಬ ಆಯ್ಕೆ ಪ್ರಕ್ರಿಯೆ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿ, ನಮ್ಮ ನಿರೀಕ್ಷೆಗೂ ಮೀರಿ 219 ಮಂದಿ ಅಭ್ಯರ್ಥಿಗಳು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಅವರಲ್ಲಿ 100 ಮಂದಿಯನ್ನು ಆಯ್ಕೆ ಮಾಡಿ ಸೆ.14ರಂದು ನಡೆಯುವ ಇನ್ನೊಂದು ಹಂತದ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಎಂದರು.
Kshetra Samachara
07/09/2021 07:34 pm