ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: 'ಅಯೋಧ್ಯೆ ಪಾವನ ಶ್ರೀರಾಮ ಜನ್ಮಭೂಮಿ' ಕೃತಿ ಅನಾವರಣ

ಮಂಗಳೂರು: ನಗರದ ಮಲ್ಲಿಕಟ್ಟೆಯಲ್ಲಿರುವ ವಿಶ್ವಶ್ರೀ ಸಭಾಂಗಣದಲ್ಲಿ ಡಾ.ಪಿ.ಅನಂತಕೃಷ್ಣ ಭಟ್ ಅವರು ಬರೆದ 'ಅಯೋಧ್ಯೆ ಪಾವನ ಶ್ರೀರಾಮ ಜನ್ಮಭೂಮಿ' ಕೃತಿ ಬಿಡುಗಡೆಯಾಯಿತು.

ಕೃತಿ ಅನಾವರಣ ಮಾಡಿ ಮಂಗಳೂರು ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿಯವರು ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ನಿರ್ಮಾಣವಾಗಬೇಕು ಎಂಬ ವಿವಿಧ ರೀತಿಯ ಹೋರಾಟದ ಬಳಿಕ ಇಂದು ಮಂದಿರ ನಿರ್ಮಾಣ ಕಾರ್ಯದ ಅಂತಿಮ ಘಟಕ್ಕೆ ತಲುಪಿದ್ದೇವೆ. ಮಂದಿರ ನಿರ್ಮಾಣ ಕಾರ್ಯದ ಹಲವು ದಶಕಗಳ ಕಾನೂನಾತ್ಮಕ ಹೋರಾಟಗಳ ಬಗ್ಗೆ ಡಾ.ಪಿ.ಅನಂತಕೃಷ್ಣ ಭಟ್ ಅವರು ಅಯೋಧ್ಯೆ ಪಾವನ ಶ್ರೀರಾಮ ಜನಮ್ಮಭೂಮಿ ಕೃತಿಯಲ್ಲಿ ಸವಿಸ್ತಾರವಾಗಿ ಬರೆದಿದ್ದಾರೆ. ಮುಂದಿನ ಪೀಳಿಗೆಗೆ ಅಗತ್ಯದ ಮಾಹಿತಿಗಳು ಈ ಕೃತಿಯಲ್ಲಿವೆ. ಶ್ರಿರಾನ ಆದರ್ಶ, ವಿಚಾರಧಾರೆ ಈ ದೇಶದ ಜನರಿಗೆ ಪ್ರೇರಣೆ ದೊರೆತಿದೆಯೇ ಅದೇ ರೀತಿ ಅಯೋಧ್ಯಾ ಶ್ರೀರಾಮ ಮಂದಿರದ ಹೋರಾಟ ಭಾಗಗಳು ಮುಂದಿನ ಪೀಳಿಗೆಗೆ ತಿಳಿಯಬೇಕು ಎನ್ನುವ ಉದ್ದೇಶದಿಂದ ಈ ಕೃತಿ ರಚನೆಯಾಗಿರೋದು ಸಂತೋಷದ ವಿಷಯ ಎಂದು ಹೇಳಿದರು.

ಶಾಸಕ ವೇದವ್ಯಾಸ ಕಾಮತ್ ಅವರು ಮಾತನಾಡಿ, ಹಲವಾರು ವರ್ಷಗಳ ಕನಸಿನ ಸಾಕಾರ ರೂಪವಾಗಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿದೆ. ಅದರ ನೆನಪನ್ನು ಮೆಲುಕು ಹಾಕಿಸಲು ಅಯೋಧ್ಯೆ ಪಾವನ ಶ್ರೀರಾಮ ಜನ್ಮಭೂಮಿ ಕೃತಿಯ ಅನಾವರಣ ಅವಕಾಶ ಮಾಡಿಕೊಡುತ್ತದೆ ಎಂದು ಹೇಳಿದರು.

Edited By : Nagesh Gaonkar
Kshetra Samachara

Kshetra Samachara

24/08/2021 05:04 pm

Cinque Terre

20.41 K

Cinque Terre

1

ಸಂಬಂಧಿತ ಸುದ್ದಿ