ಮುಲ್ಕಿ : ಭಾರತ ಸರಕಾರದ ನೆಹರು ಯುವ ಕೇಂದ್ರ ಮಂಗಳೂರು, ಗ್ರಾಮೀಣ ಮಾಹಿತಿ ತಂತ್ರಜ್ಞಾನ ತೋಕೂರು, ಯುವ ಜನ ಅಭಿವೃದ್ದಿ ಕೇಂದ್ರ ತೋಕೂರು, ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಯುವಕ ಸಂಘ (ರಿ), ಮಹಿಳಾ ಮಂಡಲ (ರಿ)ತೋಕೂರು ಮತ್ತು ರೋಟರಿ ಸಮುದಾಯ ದಳ ತೋಕೂರು ಜಂಟಿ ಆಶ್ರಯದಲ್ಲಿ ,"75ನೇ ಸ್ವಾತಂತ್ರ್ಯ ಉತ್ಸವವು ನಿವೃತ್ತ ಯೋಧ ಹೇಮನಾಥ ಆರ. ಕೋಟ್ಯಾನ್ ರವರಿಂದ ರಾಷ್ಟ್ರ ಧ್ವಜಾರೋಹಣ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಕಿ ರೋಟರಿ ಕ್ಲಬ್ ಅಧ್ಯಕ್ಷರಾದ ರೋ ಶಿವರಾಮ ಜಿ. ಅಮೀನ್ ವಹಿಸಿ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ 24 ವರ್ಷ ದೇಶ ಸೇವೆ ಯನ್ನು ಸಲ್ಲಿಸಿ ನಿವೃತ್ತರಾದ ಯೋಧ ಹೇಮನಾಥ ಆರ್. ಕೋಟ್ಯಾನ್‌ರನ್ನು ಗ್ರಾಮಸ್ಥರ ಪರವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಹೇಮನಾಥ ಆರ್. ಕೋಟ್ಯಾನ್ ""ಯುವಕರಿಗೆ ದೇಶಸೇವೆಯನ್ನು ಮಾಡಲು ಸೇನೆಯಲ್ಲಿ ವಿಪುಲವಾದ ಅವಕಾಶಗಳಿವೆ ಎಂದರು. ಯುವಕ ಸಂಘದ ಆರೋಗ್ಯ ನಿಧಿಯಿಂದ ಗ್ರಾಮದ ಆರ್ಥಿಕವಾಗಿ ಹಿಂದುಳಿದ ಕಿಡ್ನಿ ಡಯಾಲಿಸಿಸ್‌ಗೆ ತುತ್ತಾಗಿರುವ ಸುಷ್ಮಾರಿಗೆ ರೂಪಾಯಿ ಹತ್ತು ಸಾವಿರವನ್ನು ವೈದ್ಯಕೀಯ ಸಹಾಯಧನವಾಗಿ ನೀಡಲಾಯಿತು.ಯುವಕ ಸಂಘದ ಅಧ್ಯಕ್ಷರಾದ ವಿನೋದ್ ಕುಮಾರ್ ಸ್ವಾಗತಿಸಿದರು. ಮಹಿಳಾ ಮಂಡಲದ ಸದಸ್ಯರಾದ ಯಶೋದ .ಪಿ.ರಾವ್ ಧನ್ಯವಾದ ಸಮರ್ಪಿಸಿದರು.
ಪಂಚಾಯತ್ ಸದಸ್ಯರಾದ ಹೇಮನಾಥ ಅಮೀನ್ ನಿರೂಪಿಸಿದರು.
ಈ ಸಂದರ್ಭದಲ್ಲಿ ಸ್ಥಾಪಕ ಸದಸ್ಯರಾದ ಲೋಕಯ್ಯ ಸಾಲ್ಯಾನ್, ಸುಂದರ ಸಾಲ್ಯಾನ್, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾದ ಹರಿದಾಸ್ ಭಟ್, ರೋಟರಿ ಸಮುದಾಯ ದಳ ದ ಅಧ್ಯಕ್ಷರಾದ ವಿಪುಲಾ.ಡಿ. ಶೆಟ್ಟಿಗಾರ್, ಮಹಿಳಾ ಮಂಡಲದ ಉಪಾಧ್ಯಕ್ಷರಾದ ವಿಮಲಾ ಶೆಟ್ಟಿಗಾರ್ ಉಪಸ್ಥಿತರಿದ್ದರು.
Kshetra Samachara
18/08/2021 08:10 pm